ಶಿಕ್ಷಕಿ : ರಾಜು ನಡಕೊಂಡು ಬರ್ತಿಯಲ್ಲ ಸರ್ಕಾರದವರು ಕೊಟ್ಟ ಸೈಕಲ್ ಏನಾಯ್ತು ?
ರಾಜು : ನಾಲ್ಕು ಜನಕ್ಕೆ ಉಪಯೋಗವಾಗಲಿ ಅಂತ ಬಾಡಿಗೆಗೆ ಇಟ್ಟಿದ್ದೀನಿ ಮೇಡಂ.
***
ರಾಜು : ಅಲ್ವೋ ಮಗು, ಹೀಗೆ ಕಾಗೆ ಕಾಲು, ಗೂಬೆ ಕಾಲು ಅಕ್ಷರದಲ್ಲಿ ಬರೆದರೆ ಅದನ್ನು ಹೇಗೆ ನಿಮ್ಮ ಮಿಸ್ ಓದ್ತಾರೆ ?
ಮಗ : ನಾನು ಅಕ್ಷರನ ನೀಟಾಗಿ ಬರೀತೀನಿ. ಆದ್ರೆ ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಮಿಸ್ ಗೆ ಗೊತ್ತಾಗಿಬಿಡುತ್ತೆ. ಅದಕ್ಕೆ ಹೇಗೆ ಬೆಇಯೋದು.
***
ಅಜ್ಜಿ : ಯಾಕೋ ರಾಜು ಹಾಗೆ ನರಳುತ್ತಾ ಇದ್ದೀಯಾ ?
ರಾಜು : ತುಂಬಾ ಹೊಟ್ಟೆ ನೋವು ಕಣಜ್ಜಿ
ಅಜ್ಜಿ : ಅದಕ್ಕೆ ಒಂದು ಕೆಲಸ ಮಾಡು, ಹರಳೆಣ್ಣೆ ಕುಡಿ
ರಾಜು : ಹರಳೆಣ್ಣೆ ಕುಡಿದರೆ ಬೆಳಗ್ಗೆ ಬೇಗ ಏಳ್ತೀನಿ ತಾನೇ ?
ಅಜ್ಜಿ : ಬೆಳಗ್ಗೆ ಏನು, ಅದಕ್ಕೆ ಮುಂಚೆ ಟಾಯ್ಲೆಟ್ ಗೆ ಓಡ್ತಾ ಇರ್ತೀಯ.