ವಾತಾವರಣದಲ್ಲಿ ಹಲವು ಬಗೆಯ ರೋಗಾಣುಗಳು, ಬ್ಯಾಕ್ಟೀರಿಯಾ, ಫಂಗಸ್ ಪರೋಪಕಾರಿ, ಪರಾವಲಂಬಿಗಳು, ಕಣ್ಣಿಗೆ ಕಾಣದ ಕೀಟಾಣುಗಳು ಮತ್ತು ಶರೀರದಲ್ಲಿ ಹಾಗೆಯೇ, ಇಲ್ಲವೇ ಆಹಾರದ ಜೊತೆ ಪ್ರವೇಶಿಸುತ್ತದೆ. ಸಾಮಾನ್ಯ ನೆಗಡಿಯಿಂದ ಫ್ಲೂವರೆಗೆ ಎಷ್ಟೋ ರೋಗಗಳು ಗಾಳಿಯಲ್ಲಿ ತೇಲುವ ರೋಗಾಣುಗಳಂತೆ ಬರುತ್ತವೆ. ಇಂತಹ ಹಾನಿಕರ ವೈರಾನು, ಬ್ಯಾಕ್ಟೀರಿಯಾಗಳನ್ನು ತಡೆದು ನಮ್ಮನ್ನು ರಕ್ಷಿಸುವುದು, ನಮ್ಮ ಶರೀರದಲ್ಲಿರುವ ರೋಗ ನಿರೋಧಕ ಶಕ್ತಿ ಎಂಬ ವ್ಯವಸ್ಥೆ, ಈ ವ್ಯವಸ್ಥೆಯನ್ನು ಬಲಪಡಿಸುವುದರಿಂದ ನಮ್ಮ ಶರೀರವನ್ನು ರೋಗಮುಕ್ತಗೊಳಿಸಬಹುದು.
ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ, ರೋಗನಿರೋಧಕ ಶಕ್ತಿಯ ಪಾತ್ರ ಮುಖ್ಯವಾದದ್ದು. ಸದಾ ಅನಾರೋಗ್ಯದಿಂದ ಒಂದಾದ ನಂತರ ಮತ್ತೊಂದು ರೋಗ ಬರುತ್ತಿದ್ದರೆ, ಆ ವ್ಯಕ್ತಿಯ ರೋಗನಿರೋಧಕ ಶಕ್ತಿ ಕುಂಠಿತವಾಗಿದೆ ಎಂದು ಅರ್ಥ. ಅಂತಹ ಅಭಾದಿತ ಶಕ್ತಿಯನ್ನು ಬಲಪಡಿಸುವ ಅವಶ್ಯವಿದೆ.
ವ್ಯಾಯಾಮ :-
* ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ವ್ಯಾಯಾಮ ಬಹಳ ಅವಶ್ಯ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದಲ್ಲದೆ, ಶರೀರ ಗಟ್ಟಿಮುಟ್ಟಾಗಿರುತ್ತದೆ. ಅನಾವಶ್ಯಕ ಕೊಬ್ಬು ನಿವಾರಣೆಯಾಗುತ್ತದೆ. ಸೂಕ್ತ ರಕ್ತ ಚಲನೆಯಿಂದ ಹೃದಯ, ಶ್ವಾಸಕೋಶ ಸುಸ್ಥಿತಿಯಲ್ಲಿರುತ್ತದೆ. ಶರೀರದ ಮಾಂಸ ಖಂಡಗಳು ಬಲಗೊಳ್ಳುತ್ತದೆ.
* ವಯಸ್ಸು ವೃದಾಪ್ಯದ ಕಡೆ ವಾಲುತ್ತಿದ್ದಂತೆ ಸಹಜವಾಗಿ ರೋಗನಿರೋಧಕ ಶಕ್ತಿ ಕುಂದುತ್ತದೆ. ನಿಯಮಿತ ನಿರಂತರ ವ್ಯಾಯಾಮದಿಂದ ಈ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಬಹುದು.
* ಅಮೇರಿಕದ ಒಂದು ಸಮೀಕ್ಷೆಯಂತೆ ನಿಯಮಿತ ವ್ಯಾಯಾಮ ಮಾಡುತ್ತಾ ಶಾರೀರಿಕವಾಗಿ ಫಿಟ್ ಆಗಿರುವ ಸುಮಾರು 70 ವರ್ಷಕ್ಕೂ ಮೀರಿದ ವಯೋವೃದ್ದರಲ್ಲಿ ರೋಗನಿರೋಧಕ ಶಕ್ತಿ (Immune system) ಅವರಿಗಿಂತ ಅರ್ಧ ವಯಸ್ಸಿನವರಲ್ಲಿ ಇರುವಷ್ಟೆ ಇದೆ ಎಂದು ಕಂಡು ಬಂದಿದೆ.
* ಯಾವುದೇ ಕೆಲಸ, ವ್ಯಾಯಾಮ ಮಾಡದ ಆ ವಯಸ್ಸಿನವರೇ ಆದ (70 ವರ್ಷ) ಇತರ ವೃದ್ದರಿಗಿಂತ, ವ್ಯಾಯಾಮ ಮಾಡುವವರು ಶೇ.60 ರಷ್ಟು ಅಧಿಕ ಆರೋಗ್ಯವಂತರಾಗಿರುತ್ತಾರೆ.
* ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ರೀತಿ ಫಿಟ್ ಆಗಿರುವ ವೃದ್ಧರು 60 ವರ್ಷ ದಾಟಿದ ನಂತರವೇ ಈ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಂಡರು ಎಂದು ತಿಳಿದುಬಂದಿದೆ. ಇದರಿಂದ ತಿಳಿಯುವುದೇನೆಂದರೆ ವ್ಯಾಯಾಮ ಮಾಡಲು ವಯಸ್ಸು ಕಾರಣವಲ್ಲ, ಯಾವ ವಯಸ್ಸಿನವರಾದವರು, ಇಳಿ ಬಯಸಿನಲ್ಲಿಯೂ ಮಾಡಬಹುದು.
ಎಮೋಷನ್ಸ್ – ರೋಗ ನಿರೋಧಕ ವ್ಯವಸ್ಥೆ :-
1.ಲಿಂಕ್ ಗ್ರಂಥಿಗಳು (Lymph Nodes) :- ಚಪ್ಪರದ ಅವರೇ ಬೀಜದ ಆಕಾರದಲ್ಲಿರುವ ಈ ಚಿಕ್ಕ ಗ್ರಂಥಿಗಳು ನಮ್ಮ ಕುತ್ತಿಗೆ, ಕಂಕಳು ಕಿಬ್ಬೊಟ್ಟೆ ಮತ್ತು ತೊಡೆ ಸಂಧಿಗಳಲ್ಲಿದ್ದು, ಬಿಳಿ ರಕ್ತಕಣಗಳ ಉಗ್ರಾಣದಂತೆ ಕೆಲಸ ಮಾಡುತ್ತದೆ.
2.ಟೈಮಸ್ (T-cells) :- ಟೈಮಸ್ ಟಿ-ಸೆಲ್ ಎನ್ನುವವು ಬಿಳಿರಕ್ತ ಕಣಗಳಿಗೆ ತರಬೇತಿ ಶಾಲೆ ಇದ್ದ ಹಾಗೆ ! ಮೂಳೆಯ ಮಜ್ಜೆಯಲ್ಲಿ ಉತ್ಪನ್ನವಾಗುವ ಈ ಕಣಗಳು ಥೈಮಸ್ ಬಂದು, ಪರಿಪಕ್ವಗೊಂಡು ಶರೀರದೊಳಗೆ ಬರುವ ಸೂಕ್ಷ್ಮಜೀವಗಳೊಂದಿಗೆ ಹೋರಾಡುವ ಶಕ್ತಿ ನೀಡುತ್ತದೆ.
3. ಮಜ್ಜೆ :- ಮೂಳೆಯ ಟೊಳ್ಳಾದ ಭಾಗದಲ್ಲಿರುವ ಈ ದ್ರವ ಪದಾರ್ಥಗಳಲ್ಲಿ ಬಿಳಿರಕ್ತ ಕಣಗಳು ಉತ್ಪತ್ತಿಯಾಗುತ್ತದೆ.
4. ಪ್ಲೀಹ (spleen) :- ಈ ಗ್ರಂಥಿ ಬಿಳಿ ರಕ್ತಕಣಗಳಿಗೆ ಒಂದು ಉಗ್ರಾಣ (storage)ದಂತೆ ಕಾರ್ಯನಿರ್ವಹಿಸುತ್ತದೆ. ಪಕ್ವತೆಗೆ ಬಂದ ಬಿಳಿ ರಕ್ತ ಕಣಗಳು ಬೇಕಾದ ಅಕ್ರಮಣಕ್ಕೆ ತಯಾರಾಗಲು ಸಿದ್ಧವಾಗುತ್ತದೆ.
5. ಲಿಂಫ್ ನಾಳಗಳು (lymphatic Vessels) :- ಈ ರಕ್ತನಾಳಗಳ ಮೂಲಕ ಬಿಳಿ ರಕ್ತಕಣಗಳು ಶರೀರದಲ್ಲೆಲ್ಲಾ ಸಂಚರಿಸುತ್ತಿರುತ್ತದೆ. ಲಿಂಫ್ ಗ್ರಂಥಿಗಳಿಗೂ, ರೋಗನಿರೋಧಕ ಆವಯವಗಳಿಗೂ ಈ ರಕ್ತನಾಳಗಳು ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ.
ಇದು ಅದ್ಭುತವಾದ ಸಂಗತಿ !
ಅತಿ ವ್ಯಾಯಾಮ ಸಲ್ಲದು :-
* ಕೆಲವು ಕ್ರೀಡಾಪಟುಗಳು, ಅದರಲ್ಲೂ ಓಟಗಾರರು ಹೆಚ್ಚು ಶ್ವಾಸ ಸಂಬಂಧಿ ಸೋಂಕಿಗೆ ಗುರಿಯಾಗುವುದನ್ನ ನೋಡುತ್ತೇವೆ. ಇದಕ್ಕೆ ಕಾರಣ ಅವರು ಅಗತ್ಯಕ್ಕಿಂತ ಹೆಚ್ಚು ತರಬೇತಿಯ ಮೂಲಕ ವ್ಯಾಯಾಮ ನಿರತರಾಗಿರುವುದೇ ಆಗಿದೆ. ಈ ರೀತಿ ಅತಿ ವ್ಯಾಯಾಮ ರೋಗ ನಿರೋಧಕ ಶಕ್ತಿಯನ್ನು ಕುoದಿಸುತ್ತದೆ.
ಮಿತ ವ್ಯಾಯಾಮವೆಂದರೆ….?
ವಾರದಲ್ಲಿ ಐದು ದಿನಗಳು 45 ನಿಮಿಷ ಕಾಲ, ಚುರುವಾಗಿ ವ್ಯಾಯಾಮ ಮಾಡುವುದು ಒಳ್ಳೆಯ ಕ್ರಮ. ಇಂತಹವರ ರಕ್ತ ಪರೀಕ್ಷೆ ಮಾಡಿದಾಗ, ಅವರಲ್ಲಿ ಮೊದಲಿಗಿಂತ ಹೆಚ್ಚಾಗಿರುವ ರೋಗನಿರೋಧಕ ಶಕ್ತಿಕಣಗಳು ಇರುವುದು ಕಂಡುಬಂದಿತು. ಬಿಳಿ ರಕ್ತಕಣಗಳು ಸಾಕಷ್ಟು ವೃದ್ಧಿಯಾಗಿರುವುದು ತಿಳಿದುಬಂದಿದೆ.
* ಅಮೆರಿಕದಲ್ಲಿ ನಡೆದ ಮತ್ತೊಂದು ಸಮೀಕ್ಷೆ ಪ್ರಕಾರ, ಹೆಚ್.ಐ.ವಿ ಸೋಂಕಿನಿಂದ ನರಳುತ್ತಿರುವ ವ್ಯಕ್ತಿಗಳು, 10 ವಾರಗಳ ಒಂದು ವ್ಯಾಯಾಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ಅವರಲ್ಲಿ ಟೀ- ಸೆಲ್ ಕಣಗಳ ಸಂಖ್ಯೆ ಅಧಿಕವಾಗಿದ್ದುದು ಕಂಡುಬಂದಿತ್ತು. (ರೋಗನಿರೋಧಕ ವ್ಯವಸ್ಥೆಯಲ್ಲಿ ಟೀ-ಸೆಲ್ ಗಳದ್ದು ಮುಖ್ಯ ಪಾತ್ರವಿದೆ. ಇದು ಶರೀರದ ರೋಗಾಣಗಳೊಂದಿಗೆ ಹೋರಾಡುವ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಾಶಪಡಿಸಲು ಸಹಕರಿಸುತ್ತದೆ, ವೈರಲ್ ಸೋಂಕುಗಳನ್ನು ನಾಶಪಡಿಸಲೂ ಸಹಕರಿಸುತ್ತದೆ. (ಈ ಕಣಗಳ ಸಂಖ್ಯೆ ಇಳಿಮುಖವಾಗುವುದು ಏಡ್ಸ್ ವ್ಯಾಧಿಯ ಮುಖ್ಯ ಲಕ್ಷಣ)
ನೆಗಡಿ – ಫ್ಲೂ :-
* ಗಾಳಿಯಲ್ಲಿ ತೇಲುವ ರೋಗಾಣುಗಳ ಮೂಲಕ, ನೆಗಡಿ ಫ್ಲೂಗಳಂತಹ ರೋಗ ಬರುತ್ತದೆ. ಬೇರೆಯವರಿಂದ ನಮಗೆ ಶೀಘ್ರವಾಗಿ ಹರಡುವ ಅಂಟುರೋಗಗಳಿವು. (ಹೆಚ್ಚಾಗಿ ಚಳಿಗಾಲದಲ್ಲಿ ಸೋಂಕು ಹರಡುತ್ತದೆ.) ಇದಕ್ಕೆ ಕಾರಣ ಚಳಿಗಾಲದಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಬೆಚ್ಚಗಿನ ವಾತಾವರಣಗಳನ್ನು ಸೃಷ್ಟಿಸುವುದಾಗಿದೆ.
* ಸ್ವಚ್ಛಗಾಳಿ ಬಾರದೆ ಒಬ್ಬರು ಹೊರ ಹಾಕಿದ ಗಾಳಿಯನ್ನು ಅಲ್ಲೇ ಇರುವ ಮತ್ತೊಬ್ಬರು ಸೇವಿಸುವುದರಿಂದ, ರೋಗಾಣುಗಳು ಹರಡಲು ಕಾರಣವಾಗುತ್ತದೆ.
* ಇಂತಹ ಸಂದರ್ಭದಲ್ಲಿ ಕಿಟಕಿ ಬಾಗಿಲುಗಳನ್ನು ತೆರೆದು ಶುದ್ಧಗಾಳಿ ಪ್ರವೇಶಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.