ಮಂಡ್ಯ: ದೇವಸ್ಥಾನದ ಬೀಗ ಒಡೆದ ಖದೀಮರು ಹುಂಡಿ ಹೊತ್ತೊಯ್ದಿದ್ದು, ಹುಂಡಿಯಲ್ಲಿದ್ದ ಹಣ ದೋಚಿ ಹುಂಡಿ ಬಿಸಾಕಿ ಪರಾರಿಯಾಗಿರುವ ಘಟನೆ ಮಳವಳ್ಳಿ ಪಟ್ಟಣದ ಶಕ್ತಿದೇವತೆ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ತಡರಾತ್ರಿ ನಡೆದಿದೆ.
ಒಂದೇ ತಿಂಗಳಲ್ಲಿ ಎರಡೂ ಬಾರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ.
ಸದರಿ ದೇವಸ್ಥಾನವು ಮಳವಳ್ಳಿಯ- ಬೆಂಗಳೂರು ರಸ್ತೆಯಲ್ಲಿದ್ದು, ತಡರಾತ್ರಿ ದೇವಸ್ಥಾನದ ಬೀಗ ಒಡೆದು ಒಳನುಗ್ಗಿ ಹುಂಡಿ ಹೊತ್ತೊಯ್ದಿರುವ ಖದೀಮರು, ದೇವಸ್ಥಾನದ ಫ್ಯೂಸ್ ಕಿತ್ತು, ದೊಣ್ಣೆಯಲ್ಲಿ ಬಲ್ಪ್ ಗಳನ್ನು ಒಡೆದು ಹಾಕಿ ದೇವಸ್ಥಾನದ ಹುಂಡಿಯಲ್ಲಿದ್ದ ನಗದು ಕಳವು ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಳವಳ್ಳಿ-ಬೆಂಗಳೂರು ಹೆದ್ದಾರಿ ಪಕ್ಕದಲ್ಲೇ ದೇವಸ್ಥಾನ ಇರುವ ಹಿನ್ನಲೆ ಪದೇ ಪದೇ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಎರಡೂ ಬಾರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಇದು ಪೊಲೀಸರ ನಿರ್ಲಕ್ಷ್ಯವನ್ನು ಸಾಬೀತು ಮಾಡುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.