ಮನೆ ಮನರಂಜನೆ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ

0

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ತನ್ನ ಹೆಸರು, ಪೋಸ್ಟರ್ ​ನಿಂದ ಈಗಾಗಲೇ ಗಮನ ಸೆಳೆದಿದೆ. ಕಾಟೇರ ಸಿನಿಮಾದ ಸಣ್ಣ ಟೀಸರ್ ಜೊತೆಗೆ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ.

‘ಕಾಟೇರ’ ಸಿನಿಮಾ ಡಿಸೆಂಬರ್ 29ರಂದು ತೆರೆಗೆ ಬರಲಿದೆ. ಡಿಸೆಂಬರ್ ತಿಂಗಳಲ್ಲಿ ಬಾಲಿವುಡ್​ ನ ಹಾಗೂ ದಕ್ಷಿಣ ಭಾರತದ ಕೆಲವು ದೊಡ್ಡ ಸ್ಟಾರ್​ ನಟರ ಸಿನಿಮಾಗಳು ತೆರೆಗೆ ಬರುತ್ತಿವೆ. ಅದರ ನಡುವೆ ದರ್ಶನ್ ಸಿನಿಮಾ ಬಿಡುಗಡೆ ಆಗುತ್ತಿದೆ.

ಡಿಸೆಂಬರ್ ತಿಂಗಳ 22 ರಂದು ಹೊಂಬಾಳೆ ಫಿಲಮ್ಸ್ ನಿರ್ಮಿಸಿ, ಪ್ರಭಾಸ್ ನಟಿಸಿರುವ ‘ಸಲಾರ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ತೆರೆಗೆ ಬರಲಿದೆ. ಈ ಎರಡೂ ಸಿನಿಮಾಗಳ ಮೇಲೆ ಭಾರಿ ದೊಡ್ಡ ನಿರೀಕ್ಷೆ ಇದೆ. ಹೀಗಿರುವಾಗ ದರ್ಶನ್ ಸಿನಿಮಾ ಸಹ ಅದೇ ಸಮಯದಲ್ಲಿ ಬರುತ್ತಿದೆ.

ದರ್ಶನ್, ಕುಲುಮೆಯಲ್ಲಿ ಮಚ್ಚುಗಳನ್ನು ಮಾಡುತ್ತಿರುವ ದೃಶ್ಯ, ಮಚ್ಚುಗಳ ರಾಶಿ, ಈ ಸಿನಿಮಾ ಪಕ್ಕಾ ಮಾಸ್ ಆಕ್ಷನ್ ಸಿನಿಮಾ ಎಂಬುದನ್ನು ಜೋರಾಗಿಯೇ ಸಾರುತ್ತಿವೆ. ಟೀಸರ್ ​ನ ಕೊನೆಯಲ್ಲಿ ದರ್ಶನ್ ನಾಟಿ ಬೀಡಿ ಹೊತ್ತಿಸುವ ಸ್ಟೈಲ್ ಸಹ ಭಿನ್ನವಾಗಿದೆ.

‘ಕಾಟೇರ’ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದು, ರಾಕ್ ​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ. ಇದು ಇವರ ಮೊದಲ ಸಿನಿಮಾ. ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಜಗಪತಿ ಬಾಬು ವಿಲನ್ ಆಗಿ ನಟಿಸಿದ್ದಾರೆ.