ಮನೆ ರಾಜ್ಯ ಶಾರದಾ ವಿಲಾಸ ಕಾಲೇಜು ವಿದ್ಯಾರ್ಥಿ ಪ್ರಜ್ವಲ್ ನಾಪತ್ತೆ: ಪತ್ತೆಗೆ ಮನವಿ

ಶಾರದಾ ವಿಲಾಸ ಕಾಲೇಜು ವಿದ್ಯಾರ್ಥಿ ಪ್ರಜ್ವಲ್ ನಾಪತ್ತೆ: ಪತ್ತೆಗೆ ಮನವಿ

0

ಮೈಸೂರು: ಶಾರದಾ ವಿಲಾಸ ಕಾಲೇಜಿನಲ್ಲಿ 1 ವರ್ಷದಿಂದ ಫಾರ್ಮಸಿ ಅಭ್ಯಾಸ ಮಾಡಿಕೊಂಡಿರುವ ವಿದ್ಯಾರ್ಥಿ ಪ್ರಜ್ವಲ್ (21)   ನಾಪತ್ತೆಯಾಗಿದ್ದಾನೆಂದು ಆತನ ತಂದೆ ಅಶೋಕಪುರಂ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜ್ವಲ್ ಕಳೆದ ಒಂದು ವರ್ಷದಿಂದ ನಂಜನಗೂಡಿನಿಂದ ಮೈಸೂರಿಗೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಸಂಚರಿಸುತ್ತಿದ್ದು, ಡಿಸೆಂಬರ್ 2 ರಂದು ಬೆಳಿಗ್ಗೆ 7 ಗಂಟೆಗೆ ಕಾಲೇಜಿಗೆ ಹೋಗುತ್ತೇನೆಂದು ಹೊರಟವನು ಕಾಲೇಜು ಮುಗಿಸಿ ರಾತ್ರಿಯಾದರೂ ಮನೆಗೆ ಹಿಂತಿರುಗಿಲ್ಲ. ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ. ಈವರೆಗೆ ಪ್ರಜ್ವಲ್ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚಹರೆ: 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಕುರುಚಲು ಗಡ್ಡ, ಸಿಮೆಂಟ್ ಮತ್ತು ಚೆಕ್ಸ್ ಮಿಶ್ರಿತ ಶರ್ಟ್ ಮತ್ತು ಬ್ರೌನ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

ಈ ವಿದ್ಯಾರ್ಥಿಯ ಮಾಹಿತಿ ದೊರೆತಲ್ಲಿ ಅಶೋಕಪುರಂ ಪೊಲೀಸ್ ಠಾಣೆ ಅಥವಾ ಪೋಷಕರ ಮೊ. 9442791605ನ್ನು  ಸಂಪರ್ಕಿಸಲು ಕೋರಲಾಗಿದೆ.