ಮನೆ ಕ್ರೀಡೆ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು

ಐಸಿಸಿ ರ‍್ಯಾಂಕಿಂಗ್ ಪಟ್ಟಿ ಪ್ರಕಟ: ಅಗ್ರಸ್ಥಾನದಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು

0

ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಅಗ್ರಸ್ಥಾನದಲ್ಲಿರುವುದು ವಿಶೇಷ.

ಅಂದರೆ ಇಲ್ಲಿ ಏಕದಿನ ಬ್ಯಾಟರ್ ​ಗಳ ಶ್ರೇಯಾಂಕ ಪಟ್ಟಿಯಲ್ಲಿ ಶುಭ್ ​ಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದರೆ, ಟಿ20 ಕ್ರಿಕೆಟ್​ ಬ್ಯಾಟರ್​ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಟಾಪ್-1 ನಲ್ಲಿದ್ದರೆ, ಟೆಸ್ಟ್ ಆಲ್ ​ರೌಂಡರ್ ​​ಗಳ ರ‍್ಯಾಂಕಿಂಗ್​ ನಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಟಿ20 ಬೌಲರ್​ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223 ರನ್ ​ಗಳನ್ನು ಬಾರಿಸಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್​ ರ‍್ಯಾಂಕಿಂಗ್ ​ನಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಟಿ20 ಆಲ್ ​ರೌಂಡರ್ ​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್:

ಸೂರ್ಯಕುಮಾರ್ ಯಾದವ್ (1ನೇ ಸ್ಥಾನ)

ರುತುರಾಜ್ ಗಾಯಕ್ವಾಡ್ (7ನೇ ಸ್ಥಾನ)

ಟಿ20 ಬೌಲರ್ ​ಗಳ ರ‍್ಯಾಂಕಿಂಗ್:

ರವಿ ಬಿಷ್ಣೋಯ್ (1ನೇ ಸ್ಥಾನ)

ಟಿ20 ಆಲ್ ​ರೌಂಡರ್​ ಗಳ ರ‍್ಯಾಂಕಿಂಗ್:

ಹಾರ್ದಿಕ್ ಪಾಂಡ್ಯ (3ನೇ ಸ್ಥಾನ)

ಟೆಸ್ಟ್​ ಬ್ಯಾಟರ್ ​ಗಳ ರ‍್ಯಾಂಕಿಂಗ್:

ರೋಹಿತ್ ಶರ್ಮಾ (10ನೇ ಸ್ಥಾನ)

ಟೆಸ್ಟ್​ ಬೌಲರ್ ​ಗಳ ರ‍್ಯಾಂಕಿಂಗ್:

ರವಿಚಂದ್ರನ್ ಅಶ್ವಿನ್ (1ನೇ ಸ್ಥಾನ)

ರವೀಂದ್ರ ಜಡೇಜಾ (3ನೇ ಸ್ಥಾನ)

ಟೆಸ್ಟ್​ ಆಲ್​ ರೌಂಡರ್ ​ಗಳ ರ‍್ಯಾಂಕಿಂಗ್:

ರವೀಂದ್ರ ಜಡೇಜಾ (1ನೇ ಸ್ಥಾನ)

ರವಿಚಂದ್ರನ್ ಅಶ್ವಿನ್ (2ನೇ ಸ್ಥಾನ)

ಅಕ್ಷರ್ ಪಟೇಲ್ (5ನೇ ಸ್ಥಾನ)