ಮನೆ ಮನರಂಜನೆ ‘ಫೈಟರ್’ ಚಿತ್ರದ ಟೀಸರ್ ಬಿಡುಗಡೆ

‘ಫೈಟರ್’ ಚಿತ್ರದ ಟೀಸರ್ ಬಿಡುಗಡೆ

0

ಬಹುನಿರೀಕ್ಷಿತ ‘ಫೈಟರ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

 ‘ಪಠಾಣ್’ ಖ್ಯಾತಿಯ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ‘ಫೈಟರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬುದಕ್ಕೆ ಟೀಸರ್​ ಸಾಕ್ಷಿ ಒದಗಿಸುತ್ತಿದೆ. ಹೃತಿಕ್​ ರೋಷನ್​ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಡಿಫರೆಂಟ್​ ಆಗಿರಲಿದೆ.

ನಟಿ ದೀಪಿಕಾ ಪಡುಕೋಣೆ ಅವರು ‘ಫೈಟರ್’ ಸಿನಿಮಾದಲ್ಲಿ ಹೃತಿಕ್ ರೋಷನ್ ​ಗೆ ಜೋಡಿಯಾಗಿ ನಟಿಸಿದ್ದಾರೆ. ಟೀಸರ್ ​ನಲ್ಲಿ ಆ್ಯಕ್ಷನ್​ ದೃಶ್ಯಗಳ ಜೊತೆಗೆ ಹಾಟ್​ ದೃಶ್ಯಗಳು ಕೂಡ ಕಾಣಿಸಿವೆ

2024ರ ಜನವರಿ 25ರಂದು ‘ಫೈಟರ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ 3ಡಿಯಲ್ಲಿ ಕೂಡ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಅದ್ದೂರಿ ಬಜೆಟ್​ ನಲ್ಲಿ ಚಿತ್ರ ನಿರ್ಮಾಣ ಆಗಿದೆ. ಯುದ್ಧ ವಿಮಾನಗಳ ಮೂಲಕ ಸಾಹಸ ದೃಶ್ಯಗಳನ್ನು ತೋರಿಸಲಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಿನ್ನ ಪ್ರಯತ್ನವಾಗಿ ಗಮನ ಸೆಳೆಯಲಿದೆ. ಟೀಸರ್​ ನೋಡಿದ ಅಭಿಮಾನಿಗಳು ಪಾಸಿಟಿವ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.