ಮನೆ ಮನರಂಜನೆ ಶಾರುಖ್‌ ಖಾನ್ ನಟನೆಯ ʼಡಂಕಿʼ ಸಿನಿಮಾಕ್ಕೆ ʼಯುಎʼ ಸರ್ಟಿಫಿಕೇಟ್‌

ಶಾರುಖ್‌ ಖಾನ್ ನಟನೆಯ ʼಡಂಕಿʼ ಸಿನಿಮಾಕ್ಕೆ ʼಯುಎʼ ಸರ್ಟಿಫಿಕೇಟ್‌

0

ಮುಂಬಯಿ: ಕಿಂಗ್‌ ಖಾನ್‌ ಶಾರುಖ್‌ ಅವರ ಬಹು ನಿರೀಕ್ಷಿತ ʼ ಡಂಕಿʼ ಇದೇ ಡಿ.21 ರಂದು ವರ್ಲ್ಡ್‌ ವೈಡ್‌ ಗ್ರ್ಯಾಂಡ್‌ ಆಗಿ ರಿಲೀಸ್‌ ಆಗಲಿದೆ. ಈಗಾಗಲೇ ಸಿನಿಮಾದ ಟ್ರೇಲರ್‌ ಗೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ.

ʼಪಠಾಣ್‌ʼ, ʼಜವಾನ್‌ʼ ಬಳಿಕ ಶಾರುಖ್‌ ʼಡಂಕಿʼ ಮೂಲಕ ಹ್ಯಾಟ್ರಿಕ್‌ ಹಿಟ್ ಕೊಡುವ ನಿರೀಕ್ಷೆಯಲ್ಲಿದ್ದಾರೆ. ಸೂಪರ್‌ ಹಿಟ್‌ ನಿರ್ದೇಶಕ ರಾಜ್‌ ಕುಮಾರ್‌ ಹಿರಾನಿ ಅವರು ಸಿನಿಮಾಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದು ಈ ಕಾರಣದಿಂದ ನಿರೀಕ್ಷೆ ದುಪ್ಪಾಟ್ಟಾಗಿದೆ.

ʼಡಂಕಿʼ ಸಿನಿಮಾದ ಸೆನ್ಸಾರ್‌ ಪಾಸ್‌ ಆಗಿದೆ. ಸಿನಿಮಾಕ್ಕೆ ʼಯುಎʼ ಸರ್ಟಿಫಿಕೇಟ್‌ ನ್ನು ನೀಡಲಾಗಿದೆ. 2 ಗಂಟೆ 41 ನಿಮಿಷ‌ ಸಿನಿಮಾ ಇರಲಿದೆ. ಸಿನಿಮಾವನ್ನು ನೋಡಿದ ಸೆನ್ಸಾರ್‌ ಬೋರ್ಡ್‌, ಸೀಮಿತ ಕಟ್‌ ಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಹೇಳಿದೆ.

ಚಲನಚಿತ್ರದ ಪ್ರಾರಂಭದಲ್ಲಿ ಧೂಮಪಾನ-ವಿರೋಧಿ ಎಚ್ಚರಿಕೆಗಳನ್ನು ಸೇರಿಸುವುದರ ಬಗ್ಗೆ ಸೂಚನೆ ನೀಡಿದೆ. ‘ವಲಸಿಗರು’ ಎಂಬ ಪದವನ್ನು ಮಾರ್ಪಡಿಸಲು ಸೇರಿದಂತೆ ಇತರೆ ಕೆಲ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ʼಡಂಕಿʼ ಯಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಇತರ ಪ್ರಮುಖರು ನಟಿಸಿದ್ದಾರೆ.

ʼಡಂಕಿʼಯಲ್ಲಿ ವಲಸೆ ಸಮಸ್ಯೆಗಳು ಮತ್ತು ಜನರು ಅಕ್ರಮವಾಗಿ ಗಡಿ ದಾಟುವ ಕಥೆಯನ್ನು ಹೇಳಲಾಗಿದೆ.