ಮನೆ ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ: ಓರ್ವ ಭಯೋತ್ಪಾದಕನ ಹತ್ಯೆ ಮಾಡಿದ ಭದ್ರತಾ ಪಡೆ

ಅಂತರರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆ ಯತ್ನ ವಿಫಲ: ಓರ್ವ ಭಯೋತ್ಪಾದಕನ ಹತ್ಯೆ ಮಾಡಿದ ಭದ್ರತಾ ಪಡೆ

0

ಜಮ್ಮು: ಶನಿವಾರ ಮುಂಜಾನೆ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತಾ ಪಡೆಗಳು ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ್ದು, ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಖ್ನೂರ್‌ನ ಖೌರ್ ಸೆಕ್ಟರ್‌ನಲ್ಲಿರುವ ಐಬಿಯಿಂದ ನಾಲ್ವರು ಭಯೋತ್ಪಾದಕರ ಗುಂಪು ಗಡಿಯಲ್ಲಿ ನುಸುಳುವಿಕೆಗೆ ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆ ಕಾರ್ಯಾಚರಣೆಯನ್ನು ಆರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಳನುಸುಳುತ್ತಿದ್ದ ಭಯೋತ್ಪಾದಕರ ಮೇಲೆ ಭದ್ರತಾ ಪಡೆಗಳು ಪರಿಣಾಮಕಾರಿ ಗುಂಡಿನ ದಾಳಿ ನಡೆಸಿತು. ಈ ವೇಳೆ ಉಗ್ರರಲ್ಲಿ ಒಬ್ಬಾತ ಹತನಾಗಿದ್ದಾನೆ ಎಂದು ಅವರು ಹೇಳಿದರು.