ಮುಂಬಯಿ: ಬಾಲಿವುಡ್ ನ ಜನಪ್ರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಪಾತ್ರ ವರ್ಗದ ಆಯ್ಕೆಯ ಮೂಲಕ ಬಿಟೌನ್ ಅಂಗಳದಲ್ಲಿ ಸದ್ದು ಮಾಡಿದೆ.
2022 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಆಲಿಯಾ ಭಟ್ ಅವರೊಂದಿಗೆ ʼ ಗಂಗೂಬಾಯಿ ಕಾಥಿಯಾವಾಡಿʼ ಸಿನಿಮಾವನ್ನು ಮಾಡಿದ್ದರು. ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಹಲವು ಪ್ರಶಸ್ತಿಗಳು ಕೂಡ ಬಂದಿದ್ದವು. ಇದೀಗ ಅವರು ತಮ್ಮ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾದಲ್ಲಿ ಪ್ರೀತಿ – ಪ್ರೇಮ ಅಂಶವಿದ್ದೇ ಇರುತ್ತದೆ. ಪ್ರಣಯವನ್ನು ತಮ್ಮದೇ ಆಯಾಮದಲ್ಲಿ ಕಟ್ಟಿಕೊಡುವ ಅವರು, ಈ ಬಾರಿಯೂ ಹೊಸ ಪ್ರೇಮ ಕಥೆಯೊಂದಿಗೆ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ʼಲವ್ & ವಾರ್ʼ ಎಂದು ಸಿನಿಮಾಕ್ಕೆ ಟೈಟಲ್ ಇಡಲಾಗಿದ್ದು, ಪ್ರೀತಿಯಲ್ಲಿ ಯುದ್ಧದ ಕಥೆಯನ್ನು ಹೇಳಲಿದ್ದಾರೆ.
ಈ ಸಿನಿಮಾದಲ್ಲಿ ರಣ್ಬೀರ್ ಕಪೂರ್, ಅವರ ಪತ್ನಿ ಆಲಿಯಾ ಭಟ್ ಹಾಗೂ ವಿಕ್ಕಿ ಕೌಶಲ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಸಿನಿಮಾದ ಟೈಟಲ್ ಪೋಸ್ಟರ್ ನಲ್ಲಿ ತಿಳಿಸಲಾಗಿದೆ.
ಸಿನಿಮಾದ ಕಥೆಯ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದ್ದು, ಮುಂದಿನ ವರ್ಷದ (2025 ರ) ಕ್ರಿಸ್ಮಸ್ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದೇ ವೇಳೆ ಸಿನಿಮಾ ಹಾಲಿವುಡ್ ನ ʼಅವತಾರ್ -3 ʼ ಸಿನಿಮಾ ಕೂಡ ತೆರೆ ಕಾಣಲಿದೆ.
2007 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರು ರಣ್ಬೀರ್ ಕಪೂರ್ ಅವರೊಂದಿಗೆ ʼ ಸಾವರಿಯಾʼ ಸಿನಿಮಾ ಮಾಡಿದ್ದರು. ಇದು ರಣ್ಬೀರ್ ಮೊದಲ ಸಿನಿಮಾವಾಗಿತ್ತು. ಇದೀಗ 17 ವರ್ಷದ ಬಳಿಕ ರಣ್ಬೀರ್ ಅವರೊಂದಿಗೆ ಸಂಜಯ್ ಲೀಲಾ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.