ಮನೆ ರಾಜಕೀಯ ಆಸ್ಪತ್ರೆಯಿಂದ ಇಂದು ಶಾಸಕ ತನ್ವೀರ್ ಸೇಠ್ ಡಿಸ್ಚಾರ್ಜ್: ಅಭಿಮಾನಿಗಳಿಂದ ವಿಶೇಷ ಪೂಜೆ

ಆಸ್ಪತ್ರೆಯಿಂದ ಇಂದು ಶಾಸಕ ತನ್ವೀರ್ ಸೇಠ್ ಡಿಸ್ಚಾರ್ಜ್: ಅಭಿಮಾನಿಗಳಿಂದ ವಿಶೇಷ ಪೂಜೆ

0

ಮೈಸೂರು: ಎದೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಎನ್. ಆರ್. ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

ತನ್ವೀರ್ ಸೇಠ್ ಅವರಿಗೆ ಸೋಮವಾರ ರಾತ್ರಿ ಎದೆ ನೋವು ಕಾಣಿಸಿಕೊಂಡ ಪರಿಣಾಮ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಜ್ವರ ಹಾಗೂ ಸುಸ್ತಿನಿಂದ ಬಳಲುತ್ತಿದ್ದ ಶಾಸಕರಿಗೆ ಒಂದು ದಿನ ಆಸ್ಪತ್ರೆಯಲ್ಲೇ ಇರುವಂತೆ ವೈದ್ಯರು ಸಲಹೆ ನೀಡಿದ್ದರು. ಚಿಕಿತ್ಸೆ ಪಡೆದು ಮಂಗಳವಾರ ಮಧ್ಯಾಹ್ನ ಆರೋಗ್ಯವಾಗಿ ಮನೆಗೆ ಮರಳಿದ್ದಾರೆ.

1 ವಾರ ವಿಶ್ರಾಂತಿ: ಜ್ವರ ಹಾಗೂ ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರೋ ಶಾಸಕ ತನ್ವೀರ್ ಸೇಠ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ 1 ವಾರ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ನಿಗದಿತ ಕಾರ್ಯಕ್ರಮಗಳು ಕೂಡ ರದ್ದಾಗಿದ್ದು, ಸಂಪೂರ್ಣ ರೆಸ್ಟ್ ಮಾಡಲಿದ್ದಾರೆ. ನಿರಂತರ ಓಡಾಟ ಹಾಗೂ ಸರಿಯಾದ ಸಮಯಕ್ಕೆ ಆಹಾರ ಸೇವನೆ ಕ್ರಮ ಇಲ್ಲದಿರುವುದರಿಂದ ಎದೆ ನೋವು ಕಾಣಿಸಿಕೊಂಡಿದೆ ಅಂತ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

ತನ್ವೀರ್ ಸೇಠ್ ಆರೋಗ್ಯ ಚೇತರಿಕೆಗೆ ಪೂಜೆ: ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ತನ್ವೀರ್ ಆರೋಗ್ಯ ಚೇತರಿಕೆಗೆ ಹಿಂದೂಗಳು ಪೂಜೆ ಸಲ್ಲಿಸಿದ್ದಾರೆ. ತನ್ವೀರ್ ಸೇಠ್ ಚೇತರಿಕೆಯಾಗಲೆಂದು ಬೆಂಬಲಿಗರು ಹಾಗೂ ಅಭಿಮಾನಿಗಳು ನಗರದ ಗಾಂಧಿ ನಗರದಲ್ಲಿರುವ ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತನ್ವೀರ್ ಸೇಠ್ ಅವರಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಿ,  ತನ್ವೀರ್ ಸೇಠ್ ಹೆಸರಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.

ಹಿಂದಿನ ಲೇಖನಜೈ ಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ವಿದ್ಯಾರ್ಥಿನಿ
ಮುಂದಿನ ಲೇಖನಪತ್ರಕರ್ತರು ಪೂರ್ವಗ್ರಹಪೀಡಿತರಾಗಿ ವರ್ತಿಸಿದರೆ ಮಾನ್ಯತೆ ರದ್ದು: ವಾರ್ತಾ ಮತ್ತು ಪ್ರಸಾರ ಸಚಿವಾಲಯ