ಮನೆ ಅಪರಾಧ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹಲವೆಡೆ ಎನ್‌ಐಎ ದಾಳಿ, ಶೋಧ

ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹಲವೆಡೆ ಎನ್‌ಐಎ ದಾಳಿ, ಶೋಧ

0

ಮುಂಬೈ(Mumbai): ಸೋಮವಾರ ನಸುಕಿನಲ್ಲಿ ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆಗಿಳಿದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರಿಗೆ ಸೇರಿದ ಹತ್ತಾರು ಕಡೆಗಳಲ್ಲಿ ದಾಳಿ ನಡೆಸಿ,, ಶೋಧ ಕಾರ್ಯ  ಮುಂದುವರೆಸಿದೆ.

ಮುಂಬೈಯ ಹತ್ತಾರು ಪ್ರದೇಶಗಳಲ್ಲಿ ದಾವೂದ್ ಇಬ್ರಾಹಿಂ ಸಹಚರರು ಮತ್ತು ಹವಾಲಾ ದಂದೆ ನಡೆಸುವವರ ಮೇಲೆ ಎನ್‌ಐಎ ದಾಳಿ ನಡೆಸಿದೆ ಎಂದು ಮಾಹಿತಿ ತಿಳಿದುಬಂದಿದೆ.

ನಾಗಪದ, ಗೋರ್‌ಗಾಂವ್, ಬೊರಿವಲಿ, ಸಂತಾಕ್ರೂಜ್, ಮುಂಬ್ರಾ, ಭೆಂದಿ ಬಜಾರ್ ಹಾಗೂ ಇತರೆಡೆಗಳಲ್ಲಿ ದಾಳಿ ನಡೆದಿದೆ. ಫೆಬ್ರುವರಿಯಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.