ಮನೆ ರಾಷ್ಟ್ರೀಯ ಮಹಾರಾಷ್ಟ್ರ: ಕಾಲುವೆಗೆ ಕಾರು ಬಿದ್ದು ಮೂವರ ಸಾವು

ಮಹಾರಾಷ್ಟ್ರ: ಕಾಲುವೆಗೆ ಕಾರು ಬಿದ್ದು ಮೂವರ ಸಾವು

0

ಮಹಾರಾಷ್ಟ್ರ: ಗೊಂಡಿಯಾದ ಅಮ್ಗಾಂವ್ ಮತ್ತು ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದು ಮೂವರು ಸಾವನ್ನಪ್ಪಿದ್ದಾರೆ.

ಸಲ್ಲೇಖನ ವ್ರತದಿಂದ ದೇಹ ತ್ಯಜಿಸಿದ ಜೈನ ಧರ್ಮಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಆರು ಜನರಿದ್ದ ಎರ್ಟಿಗಾ ಕಾರು ಕಾಲುವೆಗೆ ಬಿದ್ದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ, ಇತರರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ.

ಛತ್ತೀಸ್‌ ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಅವರ ಅಂತಿಮ ಸಂಸ್ಕಾರವನ್ನು ಇಂದು ಫೆಬ್ರವರಿ 18 ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು.