ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ಈ ವರ್ಷ ಸೆಪ್ಟೆಂಬರ್ ನಲ್ಲಿ ಮಗುವಿಗೆ ದೀಪಿಕಾ ಜನ್ಮ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ಈ ಸುದ್ದಿ ತಿಳಿಸಲು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅದು ಡಿಫರೆಂಟ್ ಆಗಿದೆ. ಇದರಲ್ಲಿ ಯಾವುದೇ ಕ್ಯಾಪ್ಷನ್ ಇಲ್ಲ. ಮಗುವಿಗೆ ಸಂಬಂಧಿಸಿದ ಬಟ್ಟೆ, ಶೂ, ಆಟಿಕೆ, ಟೋಪಿ ಮುಂತಾದ ವಸ್ತುಗಳಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ. ‘ಸೆಪ್ಟೆಂಬರ್ 2024 ’ ಎಂದು ಇದರಲ್ಲಿ ಬರೆಯಲಾಗಿದೆ. ಈ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಈಗ ದೀಪಿಕಾ ಪಡುಕೋಣೆ ಅವರು ಎರಡು ತಿಂಗಳ ಗರ್ಭಿಣಿ. ಇದೇ ವರ್ಷ ಸೆಪ್ಟೆಂಬರ್ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯಕ್ಕೆ ಚಿತ್ರರಂಗದಲ್ಲಿ ಅವರು ತುಂಬ ಬೇಡಿಕೆ ಹೊಂದಿದ್ದಾರೆ. ಆದರೆ ಈಗ ಮಗು ಸಲುವಾಗಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ.
ದೀಪಿಕಾ ಪಡುಕೋಣೆ ಅವರು ಪ್ರೆಗ್ನೆಂಟ್ ಆಗಿರಬಹುದು ಎಂಬ ಗಾಸಿಪ್ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇತ್ತೀಚೆಗೆ ಅವರು ಬಾಫ್ಟಾ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲು ತೆರಳಿದ್ದರು. ಆಗ ಅವರು ಸೀರೆ ಧರಿಸಿದ್ದು. ಬೇಬಿ ಬಂಪ್ ಕಾಣಬಾರದು ಎಂಬ ಉದ್ದೇಶದಿಂದಲೇ ಅವರು ಸೀರೆ ಧರಿಸಿದ್ದರು ಎಂದು ಅನೇಕರು ಊಹಿಸಿದ್ದರು. ಜನರ ಊಹೆ ಈಗ ನಿಜವಾಗಿದೆ. ದೀಪಿಕಾ ಪ್ರೆಗ್ನೆಂಟ್ ಆಗಿರುವ ಸುದ್ದಿಯನ್ನು ಸ್ವತಃ ಬಹಿರಂಗಪಡಿಸಿದ್ದಾರೆ.