ಮನೆ ರಾಜ್ಯ ನಿಂತಿದ್ದ ವಾಹನಕ್ಕೆ ಎಕ್ಸ್‌ ಯುವಿ ಕಾರು ಢಿಕ್ಕಿ: 6 ಮಂದಿ ಸಾವು

ನಿಂತಿದ್ದ ವಾಹನಕ್ಕೆ ಎಕ್ಸ್‌ ಯುವಿ ಕಾರು ಢಿಕ್ಕಿ: 6 ಮಂದಿ ಸಾವು

0

ಚಂಡೀಗಢ: ನಿಂತಿದ್ದ ವಾಹನಕ್ಕೆ ಎಕ್ಸ್‌ ಯುವಿ ಕಾರು ಢಿಕ್ಕಿ ಹೊಡೆದ ಪರಿಣಾಮ 6 ಮಂದಿ ಸಾವನ್ನಪ್ಪಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ಭಾನುವಾರ ತಡರಾತ್ರಿ  ನಡೆದಿದೆ.

ಮಸಾಣಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ಅಪಘಾತ ಸಂಭವಿಸಿದ್ದು, ಎಕ್ಸ್‌ ಯುವಿ ಕಾರು ಖಾಟೂ ಗ್ರಾಮದಿಂದ ದೆಹಲಿಗೆ ಹಿಂತಿರುಗುತ್ತಿದ್ದ ವೇಳೆ ಈ ದುರಂತ ಘಟನೆ ಸಂಭವಿಸಿದೆ.

ಖಾರ್ಖರ ಗ್ರಾಮದ ಬಳಿ ಪಂಕ್ಚರ್ ಆದ ಕಾರಿನ ಟೈರನ್ನು ಬದಲಾಯಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಎಕ್ಸ್‌ ಯುವಿ ಕಾರು ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಆರು ಮಂದಿಗೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.