ಮನೆ ಸ್ಥಳೀಯ ಮೈಸೂರು: ಅಶುಚಿತ್ವದ ಕೇಂದ್ರವಾದ ಆರ್ ಟಿ ಓ ಕಚೇರಿ ಶೌಚಾಲಯ

ಮೈಸೂರು: ಅಶುಚಿತ್ವದ ಕೇಂದ್ರವಾದ ಆರ್ ಟಿ ಓ ಕಚೇರಿ ಶೌಚಾಲಯ

0

ಮೈಸೂರು: ಮೈಸೂರು ನಗರ ಭಾಗವಾದ ಪೂರ್ವ (55) ಆರ್ ಟಿ ಓ ಕಚೇರಿಯ ಸಾರ್ವಜನಿಕ ಶೌಚಾಲಯ ಅಶುಚಿತ್ವದ ಕೇಂದ್ರವಾಗಿದ್ದು, ಖಾಯಿಲೆ ಹರಡುವ ಭೀತಿ ಎದುರಾಗಿದೆ.

ಈಗಾಗಲೇ ರಾಜ್ಯದಲ್ಲಿ ಹನಿ ನೀರಿಗೂ ಪರದಾಡುವಂತಾಗಿದ್ದು, ಅದರ ಬಿಸಿ ಮೈಸೂರಿಗೂ ತಟ್ಟಿದೆ.

55 ಆರ್ ಟಿ ಓ ಸಾರ್ವಜನಿಕ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಅನೈರ್ಮಲ್ಯದಿಂದ ಕೂಡಿದೆ.  

ಆರ್ ಟಿ ಓ ಕಚೇರಿಗೆ ಆಗಮಿಸುವ ಸಾರ್ವಜನಿಕರು ಇದೇ ಶೌಚಾಲಯ ಉಪಯೋಗಿಸಬೇಕಾಗಿದ್ದು, ನೀರಿಲ್ಲದೇ, ಸ್ವಚ್ಛತೆಯೂ ಇಲ್ಲದೇ ಇರುವುದರಿಂದ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ಖಾಯಿಲೆಯ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಛತೆಗೆ ಒತ್ತು ನೀಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ‘ಸವಾಲ್ ವಾಹಿನಿ’ಯ ಮನವಿಯಾಗಿದೆ.