ಮನೆ ರಾಜ್ಯ ಮಳವಳ್ಳಿ:  ಕಾವೇರಿ ನದಿಯಲ್ಲಿ ಈಜಲು‌ ಹೋದ ನಾಲ್ವರು ಸಾವು.!

ಮಳವಳ್ಳಿ:  ಕಾವೇರಿ ನದಿಯಲ್ಲಿ ಈಜಲು‌ ಹೋದ ನಾಲ್ವರು ಸಾವು.!

0

ಮಳವಳ್ಳಿ:  ಕಾವೇರಿ ನದಿಯಲ್ಲಿ ಈಜಲು‌ ಹೋದ ನಾಲ್ವರು ಸಾವನ್ನಪ್ಪಿರುವ ಘಟನೆ ಮಳವಳ್ಳಿಯ ಹಲಗೂರು ಸಮೀಪದ ಮುತ್ತತ್ತಿಯ ಕಾವೇರಿ ನದಿ ಬಳಿ ನಡೆದಿದೆ.

ಮೈಸೂರು ಮೂಲದ  ನಾಗೇಶ್(40), ಭರತ್(17), ಗುರು(32), ಮಹದೇವ್(16) ಸಾವನ್ನಪ್ಪಿದವರು.

ಮೈಸೂರಿನಿಂದ ಮುತ್ತತ್ತಿಗೆ ಈ‌ ನಾಲ್ವರು ಬಂದಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಾಡುವ ವೇಳೆ ಓರ್ವ ನೀರಿನಲ್ಲಿ ಮುಳುಗಿದ್ದಾನೆ. ಈತನ ರಕ್ಷಣೆಗೆ ಹೋದ ಮೂವರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.

ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.