ಮನೆ ರಾಷ್ಟ್ರೀಯ ಕೇರಳದ ದಂಪತಿ, ಸ್ನೇಹಿತೆಯ ಶವ ಅರುಣಾಚಲ ಪ್ರದೇಶದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ‌ ಪತ್ತೆ

ಕೇರಳದ ದಂಪತಿ, ಸ್ನೇಹಿತೆಯ ಶವ ಅರುಣಾಚಲ ಪ್ರದೇಶದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ‌ ಪತ್ತೆ

0

ಇಟಾನಗರ(ಅರುಣಾಚಲ ಪ್ರದೇಶ): ಕೇರಳದ ದಂಪತಿ ಹಾಗೂ ಅವರ ಸ್ನೇಹಿತೆ ಅರುಣಾಚಲ ಪ್ರದೇಶದ ಹೊಟೇಲ್‌ ವೊಂದರಲ್ಲಿ ಅನುಮಾನಾಸ್ಪದವಾಗಿ‌ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Join Our Whatsapp Group

ಮೃತರನ್ನು ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್, ಅವರ ಪತ್ನಿ ದೇವಿ ಬಿ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಶಾಲಾ ಶಿಕ್ಷಕಿ ಹಾಗೂ ತಿರುವನಂತಪುರಂ ನಿವಾಸಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ.

ಈ ಸಂಬಂಧ ಕೇರಳ ಪೊಲೀಸರು ಮಂಗಳವಾರ(ಏ.2 ರಂದು) ತನಿಖೆಗೆ ಅರುಣಾಚಲ ಪ್ರದೇಶಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.

ಮಾರ್ಚ್‌ 28 ರಂದು ಈ ಮೂವರು ಹೊಟೇಲ್‌ ಗೆ ಚೆಕ್‌ ಇನ್‌ ಆಗಿದ್ದರು. ಚೆಕ್‌ ಇನ್‌ ಆದಾಗಿನಿಂದ ಕೋಣೆಯ ಹೊರಗೆ ಬಾರದಿರುವ ಕಾರಣಕ್ಕೆ ಸಿಬ್ಬಂದಿ ಏ.1 ರಂದು ಅವರ ರೂಮ್‌ ನತ್ತ ಹೋಗಿದ್ದು, ಅಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ.