ಮನೆ ರಾಜ್ಯ ಇನ್ಸ್​ ಪೆಕ್ಟರ್​​, ಎಸಿಪಿ ಜೀ ಪ್​​​ಗೂ ಇನ್ಮುಂದೆ ಡ್ಯಾಶ್​ ಕ್ಯಾಮೆರಾ ಅಳವಡಿಕೆ: ಪೊಲೀಸ್ ಆಯುಕ್ತ ಬಿ.ದಯಾನಂದ್...

ಇನ್ಸ್​ ಪೆಕ್ಟರ್​​, ಎಸಿಪಿ ಜೀ ಪ್​​​ಗೂ ಇನ್ಮುಂದೆ ಡ್ಯಾಶ್​ ಕ್ಯಾಮೆರಾ ಅಳವಡಿಕೆ: ಪೊಲೀಸ್ ಆಯುಕ್ತ ಬಿ.ದಯಾನಂದ್  

0

ಬೆಂಗಳೂರು : ಹೊಯ್ಸಳ ವಾಹನಕ್ಕೆ ಡ್ಯಾಶ್​ ಕ್ಯಾಮೆರಾ ಅಳವಡಿಕೆ ಸಕ್ಸಸ್ ಹಿನ್ನೆಲೆ ಇನ್ಸ್​ಪೆಕ್ಟರ್​​ ಮತ್ತು ಎಸಿಪಿ ಜೀಪ್ ​​​ಗೂ ಇನ್ಮುಂದೆ ಡ್ಯಾಶ್​ ಕ್ಯಾಮೆರಾ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್  ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

Join Our Whatsapp Group

ಈ ಕುರಿತು ಎಕ್ಸ್​ನಲ್ಲಿ ಹಂಚಿಕೊಂಡಿರುವ ಅವರು, ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಇನ್ನು ಹೊಯ್ಸಳದಲ್ಲಿ  ಘಟನೆಗಳ ಮಾಹಿತಿ, ಸ್ಪಾಟ್​ ರೀಚ್ ಆದ ಸಮಯ,ಎಲ್ಲದರ ಚಿತ್ರೀಕರಣ ಆಗಿತ್ತು. ಈ ಮೂಲಕ ಹೊಯ್ಸಳದ ಸಂಪೂರ್ಣ ಸಂಪರ್ಕ ಕಮಾಂಡ್​ ಸೆಂಟರ್​​ನಲ್ಲಿದ್ದು, ಪೊಲೀಸ್​​ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಇನ್ಸ್​ಪೆಕ್ಟರ್, ಎಸಿಪಿ ಜೀಪ್​ಗೂ ಕ್ಯಾಮೆರಾ ಅಳವಡಿಕೆ ಮಾಡುವುದಾಗಿ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.