ಮನೆ ಅಪರಾಧ ನೈನಿತಾಲ್‌: ಆಳದ ಕಣಿವೆಗೆ ಬಿದ್ದು ಎಂಟು ನೇಪಾಳಿ ಪ್ರಜೆಗಳು ಸಾವು

ನೈನಿತಾಲ್‌: ಆಳದ ಕಣಿವೆಗೆ ಬಿದ್ದು ಎಂಟು ನೇಪಾಳಿ ಪ್ರಜೆಗಳು ಸಾವು

0

ನೈನಿತಾಲ್‌: ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿ ಮಂಗಳವಾರ ವಾಹನವೊಂದು 150 ಅಡಿ ಆಳದ ಕಣಿವೆಗೆ ಬಿದ್ದು ಏಳು ನೇಪಾಳಿ ಪ್ರಜೆಗಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.

Join Our Whatsapp Group

ಬೆತಲ್ಘಾಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ನೇಪಾಳಿ ಪ್ರಜೆಗಳು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ರಾಜ್ಯ ವಿಪತ್ತು ನಿರ್ವಹಣ ತಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ  ಮೂವರು ಗಾಯಳುಗಳನ್ನು ರಕ್ಷಣೆ ಮಾಡಿ, ಎಂಟು ಮೃತದೇಹಗಳನ್ನು ಹೊರತೆಗೆದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.