ಮೈಸೂರು (Mysuru)- ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಅವರು ಇಂದು ನಗರಪಾಲಿಕೆಯ ಮಾಜಿ ಸದಸ್ಯ ಅವ್ವ ಮಾದೇಶ್ (Avva Madesh) ಅವರನ್ನು ಭೇಟಿಯಾಗಿದ್ದಾರೆ.
ವಿನಯ್ ಕುಲಕರ್ಣಿ ಅವರು ಮೈಸೂರಿನ ಪಡುವರಹಳ್ಳಿಯಲ್ಲಿರುವ ಅವ್ವ ಮಾದೇಶ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಅವ್ವ ಮಾದೇಶ್ ಜೈಲಿನಿಂದ ಬಿಡುಗಡೆಯಾದ ಬಳಿಕ ಸಾಲು ಸಾಲಾಗಿ ರಾಜಕೀಯ ನಾಯಕರು ಅವರನ್ನು ಭೇಟಿಯಾಗುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರುಗಳ ಭೇಟಿಯಾಗಿದ್ದಾರೆ.