ಮನೆ ಅಪರಾಧ ಮಂಗಳೂರಿನಲ್ಲಿ ರೌಡಿಶೀಟರ್​ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

ಮಂಗಳೂರಿನಲ್ಲಿ ರೌಡಿಶೀಟರ್​ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

0

ದಕ್ಷಿಣ ಕನ್ನಡ: ಮಂಗಳೂರು ಹೊರವಲಯದ‌ ಪರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ರೌಡಿ ಶೀಟರ್ ಪವನ್ ಎಂಬಾತನಿಗೆ ರೌಡಿಶೀಟರ್ ಚರಣ್ ಎಂಬಾತ ಚೂರಿ ಇರಿದ ಘಟನೆ ನಡೆದಿದೆ.

Join Our Whatsapp Group

ಎಸ್​ ಡಿಪಿಐ ಮುಖಂಡ ಕಲಾಯಿ ಅಶ್ರಫ್ ಕೊಲೆ ಪ್ರಕರಣದ ಆರೋಪಿಯಾಗಿರುವ ಪವನ್​ ಗೆ ಗಾಂಜಾ ವ್ಯಸನಿಯಾಗಿರುವ ಆರೋಪಿ ಚರಣ್ ಚಾಕು ಇರಿದಿದ್ದಾನೆ. ಕೂಡಲೇ ಪವನ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಗಾಯಾಳು ಪವನ್ ಪಾರಾಗಿದ್ದಾನೆ. ಮೇಲ್ನೋಟಕ್ಕೆ ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.