ಮನೆ ಸುದ್ದಿ ಜಾಲ ಮಾದಕ ವಸ್ತು ತಡೆಗೆ ಜಾಗೃತಿ ಕಾರ್ಯಕ್ರಮ : ಮೈಸೂರು

ಮಾದಕ ವಸ್ತು ತಡೆಗೆ ಜಾಗೃತಿ ಕಾರ್ಯಕ್ರಮ : ಮೈಸೂರು

0

ಮೈಸೂರು: ‘ಮಾದಕ ವಸ್ತು ಸೇವನೆ ಸಮಾಜಕ್ಕೆ ಮಾರಕವಾಗಿದ್ದು, ಅವುಗಳ ಮಾರಾಟ ಮತ್ತು ಸೇವನೆ ತಡೆಗೆ ಜಾಗೃತಿ ಕಾರ್ಯಕ್ರಮ ರೂಪಿಸಿ’ ಎಂದು ಎಡಿಎಸ್‌ಪಿ ಸಿ.ಮಲ್ಲಿಕ್ ತಿಳಿಸಿದರು. ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮಾದಕ ದ್ರವ್ಯಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜೂನ್ 26 ರಂದು ಮಾದಕ ವಸ್ತು ವಿರೋಧಿ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ ವಿವಿಧ ಇಲಾಖೆ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅರಿವು ಕಾರ್ಯಕ್ರಮ ಆಯೋಜಿಸಿ’ ಎಂದರು. ಧೂಮಪಾನ ಸೇವನೆಯಿಂದ ಧೂಮಪಾನ ಮಾಡುವ ವ್ಯಕ್ತಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಅವರ ಜೊತೆ 5 ರಿಂದ 6 ಗಂಟೆ ಇರುವವರ ಮೇಲೂ ಪರಿಣಾಮ ಬೀರುತ್ತದೆ.

ಇದರಿಂದ ಮೇ 31 ರಂದು ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮವಿದ್ದು, ಆ ಸಮಯದಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಎಂದು ಹೇಳಿದರು. ಚೆಂಡು ಹೂ ಹಾಗೂ ತೊಗರಿ ಗಿಡಗಳ ಮಧ್ಯೆ ಗಾಂಜಾ ಗಿಡ ಬೆಳೆಯುವ ಸಾಧ್ಯತೆ ಹೆಚ್ಚಿದ್ದು, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿದಾಗ ಈ ಬಗ್ಗೆಯೂ ಪರಿಶೀಲಿಸಿ. ಜಿಲ್ಲೆಯಲ್ಲಿ ಬಹಳಷ್ಟು ಖಾಸಗಿ ವ್ಯಸನ ಮುಕ್ತ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳ ಕಾರ್ಯನಿರ್ವಹಣೆಗೆ ಇರುವ ಷರತ್ತುಗಳು ಹಾಗೂ ಅವುಗಳ ಪಾಲನೆಯ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು’ ಎಂದು ತಿಳಿಸಿದರು. ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಹಾಗೂ ಅವರ ವರ್ತನೆಯ ಬದಲಾವಣೆಗಳು ಹಾಗೂ ವಿದ್ಯಾರ್ಥಿಗಳು ಹೊರಗಿನಿಂದ ಪಾರ್ಸೆಲ್ ಮೂಲಕ ಖರೀದಿಸುವ ಆಹಾರ ಪದಾರ್ಥಗಳ ಬಗ್ಗೆ ನಿಗಾವಹಿಸಿ. ಮತ್ತು ಆರೋಗ್ಯ ಇಲಾಖೆಯ ಕೋಟ್ಸ್ ವಿಭಾಗದಿಂದ ಏಪ್ರಿಲ್ ತಿಂಗಳಲ್ಲಿ 561 ದೂರು ದಾಖಲಿಸಿ ₹ 1.25 ಲಕ್ಷ ದಂಡ ಸಂಗ್ರಹಿಸಲಾಗಿದೆ. ಅಬಕಾರಿ ಇಲಾಖೆಯು ಮೈಸೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 20 ಎನ್‌ಡಿಪಿಎಸ್ ಪ್ರಕರಣ ದಾಖಲಿಸಿ 14 ಆರೋಪಿಗಳನ್ನು ಬಂಧಿಸಿ, 58. 335 ಕೆ.ಜಿ. ಗಾಂಜಾ ಹಾಗೂ 50 ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದೆ ಎಂದು ಆಯಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು ಎನ್ನಲಾಗಿದೆ.