ಮನೆ ರಾಜ್ಯ ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆ

ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ರೂ. ಹಣ ಪತ್ತೆ

0

ಕಲಬುರಗಿ: ಕಲಬುರಗಿ ಮಾಜಿ ಮೇಯರ್ ಕಾರಿನಲ್ಲಿ 2 ಕೋಟಿ ಹಣ ಪತ್ತೆಯಾದ ಘಟನೆ ನಗರದ ರೈಲು ನಿಲ್ದಾಣದ ಬಳಿ ನಡೆದಿದೆ.

Join Our Whatsapp Group

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ರೈಲಿನಿಂದ ಇಳಿದು ವಾಹನ ಹತ್ತುವಾಗ ದಾಳಿ ಮಾಡಿ ಹಣವನ್ನ ಜಪ್ತಿ ಮಾಡಲಾಗಿದೆ.

ಇದು ಕಲಬುರಗಿ ಮಾಜಿ ಮೇಯರ್ ಅವರಿಗೆ ಸೇರಿದ ಕಾರು ಆಗಿದ್ದು, ವಶಕ್ಕೆ ಪಡೆಯಲಾಗಿದೆ. ಇನ್ನು ಹಣವನ್ನು ಯಾತಕ್ಕಾಗಿ ಸಾಗಾಟ ಮಾಡಲಾಗುತ್ತಿದ್ದು ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.