ಮನೆ ಕಾನೂನು ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ: ನಗದು ಸೇರಿ 16 ಲಕ್ಷ ಮೌಲ್ಯದ ವಸ್ತು ವಶಕ್ಕೆ

ಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ: ನಗದು ಸೇರಿ 16 ಲಕ್ಷ ಮೌಲ್ಯದ ವಸ್ತು ವಶಕ್ಕೆ

0

ದಕ್ಷಿಣ ಕನ್ನಡ: ಡ್ರಗ್ಸ್ ಮಾರುತ್ತಿದ್ದ ಇಬ್ಬರನ್ನ ಮಂಗಳೂರು ಸಿಸಿಬಿ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೋಟೆಕಾರ್​ ಬೀರಿ ಬಳಿ ಬಂಧಿಸಿದ್ದಾರೆ.

Join Our Whatsapp Group

ಉಳ್ಳಾಲದ ಮೊಹಮ್ಮದ್​​ ಇಶಾನ್​​, ಜಾಫರ್​ ಸಾಧಿಕ್​​ ಬಂಧಿತ ಆರೋಪಿಗಳು. ಇವರ ಬಳಿಯಿದ್ದ 9 ಲಕ್ಷ ಮೌಲ್ಯದ 407 ಗ್ರಾಂ. ತೂಕದ MDMA ಮಾದಕವಸ್ತು, ಕಾರು, ಮೊಬೈಲ್​, ನಗದು ಸೇರಿ 16,13,800 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್​​​​ ಖರೀದಿಸಿ ತಂದು, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಡ್ರಗ್ಸ್ ಮಾರುತ್ತಿದ್ದರು.

ಇನ್ನು ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಜಾಫರ್ ಎಂಬಾತನ ವಿರುದ್ಧ ಹಲ್ಲೆ ಮತ್ತು ಕೊಲೆ ಯತ್ನ ಸೇರಿ ಒಟ್ಟು 9 ಕೇಸ್ ​ಗಳು ದಾಖಲಾಗಿತ್ತು. ಇನ್ನು ಆರೋಪಿ ಮೊಹಮ್ಮದ್‌ ಇಶಾನ್ ವಿರುದ್ಧವು ಈ ಹಿಂದೆ MDMA ಮಾದಕವಸ್ತು ಮಾರಾಟ ಪ್ರಕರಣ ದಾಖಲಾಗಿದೆ. ಈ ಹಿನ್ನಲೆ ಇಂದು ಖಚಿತ ಮಾಹಿತಿ ಪಡೆದು ದಾಳಿ ಮಾಡಿದಾಗ ಮಾದಕ ವಸ್ತುಗಳು ಪತ್ತೆಯಾಗಿವೆ.