ಮನೆ ಮನರಂಜನೆ ಅಲ್ಲು ಅರ್ಜುನ್‌ ನಟನೆಯ ʼಪುಷ್ಪ-2ʼ ಸಿನಿಮಾದ ಮೊದಲ ಹಾಡು ಬಿಡುಗಡೆ

ಅಲ್ಲು ಅರ್ಜುನ್‌ ನಟನೆಯ ʼಪುಷ್ಪ-2ʼ ಸಿನಿಮಾದ ಮೊದಲ ಹಾಡು ಬಿಡುಗಡೆ

0

ಹೈದರಾಬಾದ್: ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಸಿನಿಮಾದ ಮೊದಲ ಸಿಂಗಲ್‌ ಹಾಡು ಬುಧವಾರ(ಮೇ.1 ರಂದು) ರಿಲೀಸ್‌ ಆಗಿದೆ.

Join Our Whatsapp Group

ʼಪುಷ್ಪʼ ಸಿನಿಮಾದ ಮೊದಲ ಭಾಗ ದೊಡ್ಡಮಟ್ಟದಲ್ಲಿ ಯಶಸ್ಸು ಆಗುವುದರ ಜೊತೆಗೆ ಅಲ್ಲು ಅರ್ಜುನ್‌ ಅವರಿಗೆ ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟವನ್ನು ತಂದುಕೊಟ್ಟಿತ್ತು. ಮಾಸ್‌ ಸೀನ್ಸ್‌, ಸಖತ್‌ ಡ್ಯಾನ್ಸ್.‌ ಮ್ಯಾನರಿಸಂನಿಂದ ʼಪುಷ್ಪʼ ಹಿಟ್‌ ಆಗಿತ್ತು.

ʼಪುಷ್ಪ-2ʼ ಸಿನಿಮಾದ ಮೇಲೂ ಬಹು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಪೋಸ್ಟರ್‌, ಇತ್ತೀಚೆಗೆ ಅಲ್ಲು ಅರ್ಜುನ್‌ ಅವರ ಬರ್ತ್‌ ಡೇ ಟೀಸರ್‌ ಮೂಲಕ ಸಖತ್‌ ಕುತೂಹಲ ಮೂಡಿಸಿದ ʼಪುಷ್ಪ-2ʼ ಸಿನಿಮಾದ ಮೊದಲ ಲಿರಿಕಲ್‌ ಹಾಡು ಬುಧವಾರ ರಿಲೀಸ್‌ ಆಗಿದೆ.

ʼಪುಷ್ಪ.. ಪುಷ್ಪʼ ಎನ್ನುವ ಹಾಡಿನಲ್ಲಿ ಅಲ್ಲು ಅರ್ಜುನ್‌ ಅವರ ಕ್ಯಾರೆಕ್ಟರ್ ಝಲಕ್‌ ಹಾಗೂ ಡ್ಯಾನ್ಸ್‌ ನ್ನು ತೋರಿಸಲಾಗಿದೆ. ʼಪುಷ್ಪರಾಜ್‌ʼ ವ್ಯಕ್ತಿತ್ವದ ಬಗ್ಗೆ ಹಾಡನ್ನು ಬರೆಯಲಾಗಿದೆ. ಪುಷ್ಪರಾಜ್‌ ಆಗಿ ಅಲ್ಲು ಸಖತ್‌ ಸ್ಟೈಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ʼಪುಷ್ಪ ಪುಷ್ಪʼ ಎಂಬ ಶೀರ್ಷಿಕೆಯಡಿ ಬಂದಿರುವ ಹಾಡಿನ ಸಾಹಿತ್ಯವನ್ನು ಚಂದ್ರ ಬೋಸ್ ಬರೆದಿದ್ದಾರೆ. ನಕಾಶ್ ಅಜೀಜ್ ,ದೀಪಕ್ ಬ್ಲೂ ಹಾಡಿಗೆ ಧ್ವನಿಯಾಗಿದ್ದಾರೆ. ದೇವಿ ಶ್ರೀ ಪ್ರಸಾದ್ ಹಾಡನ್ನು ಸಂಯೋಜಿಸಿದ್ದಾರೆ.

ಸುಕುಮಾರ್ ನಿರ್ದೇಶನದ ʼಪುಷ್ಪ 2: ದಿ ರೂಲ್ʼ ಚಿತ್ರದಲ್ಲಿ ಅಲ್ಲು, ರಶ್ಮಿಕಾ ಮತ್ತು ಫಾಹದ್ ಫಾಸಿಲ್‌ ಮುಂತಾದ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ.

ಹಿಂದಿನ ಲೇಖನಲೈಂಗಿಕ ದೌರ್ಜನ್ಯ ಪ್ರಕರಣ: ಜಾಮೀನು ಕೋರಿ ಕೋರ್ಟ್​ ಮೆಟ್ಟಿಲೇರಿದ ಎಚ್ ​ಡಿ ರೇವಣ್ಣ
ಮುಂದಿನ ಲೇಖನಡ್ರಗ್ಸ್ ಮಾರುತ್ತಿದ್ದ ಇಬ್ಬರ ಬಂಧನ: ನಗದು ಸೇರಿ 16 ಲಕ್ಷ ಮೌಲ್ಯದ ವಸ್ತು ವಶಕ್ಕೆ