ಮನೆ ಆರೋಗ್ಯ ಅಂಜೈನಾ ಪೆಕ್ಟೋರಿಸ್ : ಭಾಗ 2

ಅಂಜೈನಾ ಪೆಕ್ಟೋರಿಸ್ : ಭಾಗ 2

0

ಹೃದಯದ ರಂದ್ರ

 ★ತಾಯಿ ಗರ್ಭದಲ್ಲಿ ಶಿಶುವಿನ ಶ್ವಾಸಕೋಶಗಳು ತಮ್ಮ ಕರ್ತವ್ಯವನ್ನು . ಗರ್ಭದಲ್ಲಿರುವಷ್ಟು ಸಮಯ ಶಿಶುವಿನ ಹೃದಯಕ್ಕೆ ಆಮ್ಲಜನಕ ತಾಯಿಯ ರಕ್ತದಿಂದ ನೇರವಾಗಿ ಸರಬರಾಜು  ಆಗುತ್ತದೆ.

 ★ಇದು ಸುಲಲಿತವಾಗಲು ಪ್ರಕೃತಿಯೇ ಮಗುವಿನ ಹೃದಯದಲ್ಲಿ ಒಂದು ಚಿಕ್ಕ ರಂದ್ರವನ್ನು ನಿರ್ಮಿಸುತ್ತದೆ. ಈರಂಧ್ರದ ಮೂಲಕ ತಾಯಿ ರಕ್ತ ಹರಿದು ಶಿಶುವಿಗೆ ಆಮ್ಲಜನಕದ ಪೂರೈಕೆಯಾಗುತ್ತದೆ.

★ ತಾಯಿಗರ್ಭದಿಂದ ಹೊರಬಿದ್ದ ಮೇಲೆ ಶಿಶು ಉಸಿರಾಡಲು ಪ್ರಾರಂಭಿಸಿದಾಗ ಆ ರಂದ್ರ ಮುಚ್ಚಲ್ಪಡುತ್ತದೆ

★ ಆದರೆ ಕೆಲವು ಪ್ರಕರಣದಲ್ಲಿ ದೇಹ ಬೆಳವಣಿಗೆಯ ಹಂತದಲ್ಲಿ ಇರುವಾಗ ಯಾವುದೋ ಲೋಪದಿಂದ ಈರಂಧ್ರ ಹೃದಯದ ಕವಾಟು (Atrium)ಮಧ್ಯದಲ್ಲಾಗಲೀ  ಕೆಳಗಿನ ಕವಾಟಗಳಲ್ಲಿ (Ventricles)ಆಗಲಿ ಹಾಗೆಯೇ ಇದ್ದು ಬಿಡುತ್ತದೆ. 

★ ಇಂತಹ ಸಂದರ್ಭಗಳಲ್ಲಿ ಆಮ್ಲಜನಕಯುಕ್ತ ಸ್ವಚ್ಛ ರಕ್ತವೂ ಕಾರ್ಬನ್ ಡೈಆಕ್ಸೈಡ್ ಯುಕ್ತ ಮಲಿನರಕ್ತವೂ ಸೇರಿ ಹೋಗುತ್ತದೆ.

 ★ಇದರಿಂದ ದೇಹಕ್ಕೆ ಶುದರಕ್ತದ ಕೊರತೆಯಿಂದ ಬಳಲುವ ವ್ಯಕ್ತಿ ಅಲ್ಪಶ್ರಮದ ಕೆಲಸ ಮಾಡಿದರೂ ಉಸಿರಾಟದ ತೊಂದರೆಯಾಗುತ್ತದೆ.

 ★ಕೆಳಗಿನ ಕವಾಟಗಳ(Ventricles) ಮಧ್ಯೆ ರಂಧ್ರವಿದ್ದಾಗ ಅದನ್ನು ವೈದ್ಯಕೀಯ ಭಾಷೆಯಲ್ಲಿ V. S. D.ಎಂದೂ, ಮೇಲಿನ ಕವಟಗಳ ಮಧ್ಯೆ ರಂದ್ರವಿದ್ದಲ್ಲಿ ಅದನ್ನು A.S.D.ಎನ್ನುವರು 

★ದೈಹಿಕ ಬೆಳವಣಿಗೆಯಲ್ಲಿ ಇಂತಹ ತೊಂದರೆಯಾದಲ್ಲಿ. ಆಧುನಿಕ ವೈದ್ಯಕೀಯ ಪದತಿಯ ಪ್ರಕಾರ ಅದನ್ನು ಶಸ್ತ್ರಕ್ರಿಯೆಯ ಮೂಲಕ ಗುಣಪಡಿಸಬಹುದು.

★ ಕರೋನರಿ  ಅಜ್ಜಿಯೋಗ್ರಫಿ ಮಾಡುವುದರಿಂದ ರಕ್ತನಾಳಗಳ ಬಗ್ಗೆ ತಿಳಿದುಕೊಳ್ಳಬಹುದು.

★ ಅಂತಹ ಟೆಸ್ಟ್ ಗಳಿಂದ ವೈದ್ಯರು ಅಂಜೈನಾದ ಮೂಲ ಕಾರಣವನ್ನು ಪರಿಸ್ಥಿತಿಯ ಗಂಭೀರತೆಯನ್ನು ತಿಳಿದುಕೊಳ್ಳುತ್ತಾರೆ.ತಕ್ಕ ಚಿಕಿತ್ಸೆ ಮಾಡುತ್ತಾರೆ.ಒಮ್ಮೊಮ್ಮೆ ಔಷಧಿಯಿಂದಲೇ ಗುಣಪಡಿಸಬಹುದು ಕೆಲವೊಮ್ಮೆ ಶಸ್ತ್ರಚಿಕಿತೆಯ ಅವಶ್ಯಕ ಉಂಟಾಗಬಹುದು. ಅದು ನುರಿತ ತಜ್ಞ ವೈದ್ಯರ ನಿರ್ಧಾರವನ್ನು ಅವಲಂಬಿಸಿರುತ್ತದೆ.

★ ಸಾಮಾನ್ಯವಾಗಿ ಔಷಧಿಗಳಿಂದಲೇ ಅಂಜೈನಾವನ್ನು ನಿಯಂತ್ರಿಸಬಹುದಾದರೂ, ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ .

 ★ನಿಯಮಿತವಾಗಿ ಔಷಧಿಗಳನ್ನು ಸೇವಿಸುತ್ತಿದ್ದರೂ, ನೋವು ತೀವ್ರವಾಗಿದ್ದು ಮತ್ತೆ ಕಾಣಿಸಿಕೊಳ್ಳುತ್ತಿದ್ದರೆ, ಬಹಳ ದಿನಗಳವರೆಗೂ ಮುಂದುವರಿದಲ್ಲಿ ಆಂಜಿಯೋಗ್ರಫಿಯಿಂದ, ಕರೋನರಿ ದಮನಿಗಳು ಮತ್ತಷ್ಟು ಸಂಕುಚಿತಗೊಳ್ಳುತ್ತಿದೆ  ಎಂದು ತಿಳಿದುಬಂದರೆ, ಬೈ – ಪಾಸ್ ಸರ್ಜರಿ (Coronary Artery Bypass)ಯಿಂದಲೋ, ಆಂಜಿಯೋ ಪ್ಲಾಸ್ಟಿ(Angioplasty) ಯಿಂದಲೋ  ಹೃದಯದ ಮಾಂಸ ಖಂಡಗಳಿಗೆ ರಕ್ತದ ಸರಬರಾಜನ್ನು ಸರಿಪಡಿಸುತ್ತಾರೆ. 

 ಮನೆ ಮದ್ದು — ಸ್ವಯಂ ವೈದ್ಯ

★ ಹೃದಯದ ಬೆನೆ

ಯಾದಲ್ಲಿ ಕೆಲಸ ಸ್ಥಗಿತಗೊಳಿಸಿ ವಿಶ್ರಾಂತಿ ಪಡೆಯಬೇಕು. ಓಡಾಡುತ್ತಿದ್ದರೆ ನಿಂತು, ಕೆಲವು ನಿಮಿಷ ಹಾಗೆ ನಿಲ್ಲಬೇಕು. ಕೆಲವು ಕ್ಷಣಗಳಲ್ಲಿ ನೋವು ಮಾಯವಾಗುವುದು. ಇಲ್ಲದಿದ್ದಲ್ಲಿ ನೋವು ಕಡಿಮೆಯಾಗದೆ ಅಪಾಯ ತಪ್ಪಿದ್ದಲ್ಲ.

 ★ಡಾಕ್ಟರು ನಿಗದಿಪಡಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸಬೇಕು. ಸದಾ ಜೊತೆಯಲ್ಲಿ ಒಯ್ಯಬೇಕು ಅವುಗಳ ಆಖೈರು ತಾರೀಖಿನ ಬಗ್ಗೆ ಎಚ್ಚರ ವಹಿಸಬೇಕು.

 ★ವೈದರು ತಿಳಿಸಿದಂತೆ ಕ್ರಮಬದ್ಧವಾಗಿ ವ್ಯಾಯಾಮ ಮಾಡಬೇಕು. ಅಂತಹ ವ್ಯಾಯಾಮ ಅತಿಯಾಗಿರದಂತೆ ನೋಡಿಕೊಳ್ಳಬೇಕು.

 ★ಧೂಮಪಾನ ವರ್ಜಿಸಬೇಕು.

 ★ಅತಿಯಾದ ಆಹಾರ ಸೇವನೆ ಕೂಡದು. ನಿಯಮಿತವಾಗಿ ಮಿತವಾಗಿ ಸೇವಿಸಿ.

 ★ಊಟ ಮಾಡಿದ ತಕ್ಷಣ ಯಾವ ರೀತಿಯ ಕಠಿಣಶ್ರಮ ಮಾಡಬಾರದು. ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ .

 ★ಅತಿ ಜಾಸ್ತಿ ಚಳಿ, ಗಾಳಿ ವಾತಾವರಣದಿಂದ ದೂರವಿರಿ.

 ★ಕೊಬ್ಬಿನಂಶವಿರುವ ಆಹಾರ ತ್ಯಜಿಸಿ.

 ★ದೇಹಕ್ಕೆ ಅತಿ ಶ್ರಮವೆನಿಸುವ ಕೆಲಸ ಮಾಡಬೇಡಿ.

 ★ಸಾಧ್ಯವಾದಷ್ಟು ಕೋಪ,ದುಃಖ,ಮಾನಸಿಕ ಉದ್ವೇಗ,ಒತ್ತಡಗಳಿಂದ ದೂರವಿರಿ.