ಮನೆ ಮನರಂಜನೆ ಜೂನ್‌ 7 ರಂದು “ಯಂಗ್‌ ಮ್ಯಾನ್‌’ ಸಿನಿಮಾ ಬಿಡುಗಡೆ

ಜೂನ್‌ 7 ರಂದು “ಯಂಗ್‌ ಮ್ಯಾನ್‌’ ಸಿನಿಮಾ ಬಿಡುಗಡೆ

0

“ಯಂಗ್‌ ಮ್ಯಾನ್‌’ ಎಂಬ ಸಿಂಗಲ್‌ ಟೇಕ್‌ ಸಿನಿಮಾ ಜೂನ್‌ 7 ರಂದು ಬಿಡುಗಡೆಯಾಗಲಿದೆ. ಮುತ್ತುರಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದು, ವಿಜಯಲಕ್ಷ್ಮೀ ರಾಮೇಗೌಡ ನಿರ್ಮಾಣ ಮಾಡಿದ್ದಾರೆ.

Join Our Whatsapp Group

ಕ್ರಿಯೇಟಿವ್‌ ಹೆಡ್‌ ಆಗಿ ಮುರಳಿ ಎಸ್‌ ವೈ ಕಾರ್ಯ ನಿರ್ವಹಿಸಿದ್ದಾರೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್‌ ವೀನಸ್‌ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸುನೀಲ್‌ ಗೌಡ, ರಾಶಿಕಾ ಕರಾವಳಿ, ಹರೀಶ್‌ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್‌, ನಯನ ಪುಟ್ಟಸ್ವಾಮಿ, ತನುಜಾ, ಅನುಕುಮಾರ್‌, ಜಯರಾಮ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.