ಮನೆ ಉದ್ಯೋಗ ಜೂ.೭ ರಂದು ಮಿನಿ ಉದ್ಯೋಗ ಮೇಳ

ಜೂ.೭ ರಂದು ಮಿನಿ ಉದ್ಯೋಗ ಮೇಳ

0

ಮಂಡ್ಯ:- ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಮೆ.ಗ್ರಾಸಿಂ ಇಂಡಸ್ಟ್ರೀಸ್ ಆದಿತ್ಯಾ ಬಿರ್ಲಾ ಗ್ರೂಪ್, ಮೆ.ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ, ಬಂಧನ್ ಬ್ಯಾಂಕ್ ಲಿಮಿಟೆಡ್ ಮತ್ತು ಮೆ. ಶಾಹಿ ಎಕ್ಸ್ ಪೋರ್ಟ್ ಪ್ರೈ. ಲಿ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಕುರಿತು ಜೂನ್ ೦೭ ರಂದು ಬೆಳಗ್ಗೆ ೧೦.೩೦ ಗಂಟೆಗೆ ಮಿನಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.

Join Our Whatsapp Group

ಪಿ.ಯು.ಸಿ. ಐ.ಟಿ.ಐ (ಯಾವುದೇ ಟ್ರೇಡ್), ಡಿಪ್ಲಮೋ (ಪ್ಯಾರಾಮೆಡಿಕಲ್, ಆಟೋಮೊಬೈಲ್  ಫಿಟ್ಟರ್, ಟರ್ನ್ ರ್ & ಮೆಕ್ಯಾನಿಕಲ್) ಹಾಗೂ ಯಾವುದೇ ಪದವಿ/ ಯು.ಜಿ ಉತ್ತೀರ್ಣರಾದ ೧೮ ರಿಂದ ೩೨ ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ಜೂನ್ ೦೭ ರಂದು ಬೆಳಗ್ಗೆ ೧೦.೩೦ ಗಂಟೆಗೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗೆ ತಮ್ಮ ಬಯೋಡೇಟಾಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ೦೮೨೩೨-೨೯೫೧೨೪, ೮೬೬೦೦೬೧೪೮೮ & ೯೧೬೪೬೪೨೬೮೪ ನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉದ್ಯೋಗಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.