ಮನೆ ಮನರಂಜನೆ ‘ಸಹಾರಾ’ ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಗಣೇಶ್

‘ಸಹಾರಾ’ ಚಿತ್ರದ ಹಾಡು ಬಿಡುಗಡೆ ಮಾಡಿದ ನಟ ಗಣೇಶ್

0

ಕೆಲವು ಕಾರಣಗಳಿಂದ ‘ಸಹಾರಾ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕನ್ನಡದ ಈ ಸಿನಿಮಾದಲ್ಲಿ ಕ್ರೀಡಾ ಆಧಾರಿತ ಕಥೆ ಇದೆ. ಜೂನ್ 7ರಂದು ಈ ಸಿನಿಮಾ ತೆರೆ ಕಾಣಲಿದೆ. ‘ಸಹಾರಾ’ ಸಿನಿಮಾದಲ್ಲಿ ಸಾರಿಕಾ ರಾವ್   ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಗೋಲ್ಡನ್ ಸ್ಟಾರ್’ ಗಣೇಶ್  ಅವರು ಈ ಸಿನಿಮಾದ ಹಾಡೊಂದನ್ನು ರಿಲೀಸ್​ ಮಾಡಿ, ಶುಭ ಕೋರಿದ್ದಾರೆ.

Join Our Whatsapp Group

ಈ ಸಿನಿಮಾದ ಕಥೆಯ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಮಂಡ್ಯದ ಹುಡುಗಿಯೊಬ್ಬಳು ಕ್ರಿಕೆಟ್ ಆಟಗಾರ್ತಿ ಆಗುವ‌ ಕನಸನ್ನು ಕಾಣುತ್ತಾಳೆ. ಆ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಆಕೆಗೆ ಕೆಲವು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಮೀರಿ‌ ಆಕೆ ಸಾಧನೆಯ ಮೆಟ್ಟಿಲು ಏರುತ್ತಾಳೆ. ಈ ಎಲ್ಲ ವಿವರಗಳನ್ನು ಎಳೆ ಎಳೆಯಾಗಿ ತೆರೆದಿಡಲಿದೆ ‘ಸಹಾರಾ’ ಸಿನಿಮಾ. ಆ ಕಾರಣದಿಂದ ಈ ಚಿತ್ರದ ಬಗ್ಗೆ ಸಿನಿ‌ಪ್ರೇಮಿಗಳಲ್ಲಿ ಕೌತುಕ ಮೂಡಿದೆ.

ಗಣೇಶ್​ ಬಿಡುಗಡೆ ಮಾಡಿದ ಸಾಂಗ್​ ಸದ್ದು ಮಾಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಸಹಾರಾ’ ಸಿನಿಮಾಗೆ ಮಂಜೇಶ್ ಭಗವತ್ ಅವರು ನಿರ್ದೇಶನ ಮಾಡಿದ್ದಾರೆ. ಅಂಕುಶ್ ರಜತ್ ಅವರು ವಿಲನ್​ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೂರಜ್ ಜೋಯಿಸ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಆಂಟೊನಿ ರುತ್ ವಿನ್ಸೆಂಟ್ ಅವರು ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ವಿಜಯ್ ಎಂ. ಕುಮಾರ್ ಅವರ ಸಂಕಲನ ಈ ಸಿನಿಮಾಗಿದೆ.

‘ಸಹಾರಾ’ ಸಿನಿಮಾಗೆ ಅನೇಕರ ಬೆಂಬಲ ಸಿಕ್ಕಿದೆ. ಈ ಮೊದಲು ಕ್ರಿಕೆಟರ್​ ಕೃಷ್ಣಪ್ಪ ಗೌತಮ್ ಅವರು ಈ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿ ಶುಭ ಹಾರೈಸಿದ್ದರು. ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಡಿಜಿಟಲ್​ನಲ್ಲಿ ಟ್ರೇಲರ್​ ಅನಾವರಣ ಮಾಡಿದ್ದರು. ‘ಮಾ ಕ್ರಿಯೆಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದ್ದು, ಎಂ. ಗೌಡ ಬಂಡವಾಳ ಹೂಡಿದ್ದಾರೆ.