ರಾಜು : ಮನೆ ಪ್ಲಗ್ ನಲ್ಲಿ ಹೊಗೆ ಬರ್ತಾ ಇತ್ತು. ಕೆ.ಇ.ಬಿ ಕಛೇರೀಲೀ ಫೋನ್ ಮಾಡಿ ಕೆ.ಇ.ಬಿ. ಕಛೇರೀಲೀ ಯಾರಿದ್ದೀರಿ?
ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಗ್ಬೇಕಿತ್ತು?
ರಾಜು : ನಿಮ್ಮ ಕಛೇರೀಲೀ ಯಾರಾದ್ರೂ ಬೀಡಿ,ಸಿಗರೇಟು ಸೇದುತ್ತಿದ್ದಾರಾ
ಕೆ.ಇ.ಬಿ ಕಚೇರಿಯಿಂದ : ಯಾಕೆ ಏನಾಯ್ತು
ರಾಜು : ನಮ್ಮನೆ ಫ್ಲಾಗ್ ನಲ್ಲಿ ಹೊಗೆ ಬರ್ತಾ ಇದೆ.
***
ಗೀತಾ : ರೀ ಕಳ್ಳ ನುಗ್ಗಿ ನಾನು ಮಾಡಿದ ಕೇಸರಿಬಾತ್ ತಿಂದಿದ್ದಾನೆ.
ರಾಜು : ನೀನು ಮಾಡಿದ ಕೇಸರಿ ಬಾತ್ ತಿಂದ್ನಾ ತಡಿ ಹಾಗಿದ್ರೆ ಫೋಲಿಸಿಗೆ ಬೇಡ ಡಾಕ್ಟೀರಿಗೆ ಪೋನ್ ಮಾಡ್ತೀನಿ.
ಅಳಿಯ : (ಮದುವೆಯಾಗಿ ವರ್ಷ ಕಳೆದರೂ ಹೆಂಡತಿ ಹೊಂದಾಣಿಕೆಯಾಗಿಲ್ಲ. ಆಗ ಅಳಿಯ ಮಾವ ರಾಜುಗೆ ಹೀಗೊಂದು ಎಸ್.ಎಮ್.ಎಸ್.ಕಳುಹಿಸಿದ) “ನಿಮ್ಮ ಪ್ರಾಡಕ್ಟ್ ನಮ್ಮ ಬೇಡಿಕೆಗೆ ಹೊಂದಿಕೆಯಾಗುವುದಿಲ್ಲ.”
ರಾಜು : (ಅದಕ್ಕೆ ರಾಜು ಈ ರೀತಿ ಉತ್ತರಿಸಿದ) “ವಾರಂಟಿ ಅವಧಿ ಮುಗಿದಿದೆ ಆದ್ದರಿಂದ ಉತ್ಪಾದಕರು ಜವಾಬ್ದಾರವಲ್ಲ.”