ಮನೆ ಸ್ಥಳೀಯ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮೈಸೂರು ವಲಯ 8ರ ಅಥ್ಲೆಟಿಕ್ ಕೂಟದ ಪುರುಷ, ಮಹಿಳೆಯರ...

ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮೈಸೂರು ವಲಯ 8ರ ಅಥ್ಲೆಟಿಕ್ ಕೂಟದ ಪುರುಷ, ಮಹಿಳೆಯರ ಆಯ್ಕೆ ಟ್ರಯಲ್ಸ್ ಉದ್ಘಾಟನೆ ನಾಳೆ

0

ಮೈಸೂರು: ಮಹಾಜನ ಶಿಕ್ಷಣ ಸಂಸ್ಥೆಯ ಎಸ್ ಬಿಆರ್ ಆರ್ ಮಹಾಜನ ಕಾನೂನು ಕಾಲೇಜಿನ ವತಿಯಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮೈಸೂರು ವಲಯ 8ರ ಅಥ್ಲೆಟಿಕ್ ಕೂಟದ ಪುರುಷ ಮತ್ತು ಮಹಿಳೆಯರ ಆಯ್ಕೆ ಟ್ರಯಲ್ಸ್ ಉದ್ಘಾಟನಾ ಕಾರ್ಯಕ್ರಮವು ಜೂನ್ 15 ರಂದು ಬೆಳಿಗ್ಗೆ 9.30ಕ್ಕೆ ನಗರದ  ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ.

Join Our Whatsapp Group

ಕಾರ್ಯಕ್ರಮವನ್ನು ಮಹಾಜನ ಶಿಕ್ಷಣ ಸಂಸ್ಥೆಗಳ ಗೌರವಾನ್ವಿತ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಉದ್ಘಾಟಿಸಲಿದ್ದಾರೆ.

ಎಸ್ ಬಿಆರ್ ಆರ್ ಮಹಾಜನ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯ ಕೆ ಉಪಸ್ಥಿತರಿರಲಿದ್ದಾರೆ.

ಎಸ್ ಬಿಆರ್ ಆರ್ ಮಹಾಜನ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸಿದ್ದರಾಜು ಕಾರ್ಯಕ್ರಮದ ಸಂಯೋಜಕರಾಗಿದ್ದಾರೆ.