ರಾಜು : ಅಪ್ಪಾ ಯಾರೋ ಡೊನೇಷನ್ ಕೇಳೋಕೆ ಬಂದಿದ್ದಾರೆ.
ಅಪ್ಪ : ಯಾವುದಕ್ಕಂತೆ ಡೊನೇಷನ್?
ರಾಜು : ಸಿಮ್ಮಿಂಗ್ ಪೂಲ್ ಕಟ್ಟಿಸ್ತಾರಂತೆ.
ಅಪ್ಪ : ಒಂದು ಕೊಡ ನೀರು ಕೊಟ್ಟು ಕಳಿಸು.
ಕಿಟ್ಟು : ರಾಜು ನಿಂಗೆ ಎಷ್ಟೋ ಮಕ್ಕಳು?
ರಾಜು: ಬರೋಬರಿ ಒಂದು ಡಜನ್.
ಕಿಟ್ಟು: ಫ್ಯಾಮಿಲಿ ಪ್ಲಾನಿಂಗ್ ರವರು ಯಾರು ಬಂದು ಏನು ಹೇಳಲಿಲ್ವೇ?
ರಾಜು: ಬಂದಿದ್ರು.
ಕಿಟ್ಟು: ಬಂದೋರು ಏನೂ ಹೇಳಿಲಿಲ್ವೇ?
ರಾಜು: ಇದು ಸ್ಕೂಲ್ ಇರಬಹುದೂ ಅಂತಹ ಹಾಗೇ ಹೊರಟು ಹೋದ್ರು.
***
ನ್ಯಾಯಾಧೀಶರು : ಹತ್ತು ವರ್ಷದಲ್ಲಿ ನೀನು ಏನು ಅಪರಾಧ ಮಾಡಿಲ್ಲ ಏಕೆ?
ಅಪರಾಧಿ : ಹತ್ತು ವರ್ಷ ನಾನು ಜೇಲಿನಲ್ಲಿದ್ದೆ. ಅದಕ್ಕೆ ಕಾರಣ ನೀವೇ.
ನ್ಯಾಯಾಧೀಶರು: ಸಾಧ್ಯವಿಲ್ಲ ಏಕೆಂದರೆ ಆಗ ನಾನು ನಾನಿನ್ನು ನ್ಯಾಯಾಧೀಶನಾಗಿರಲಿಲ್ಲ.
ಅಪರಾಧಿ : ಅದು ನನಗೆ ಗೊತ್ತು ಆಗ ನೀವು ನನ್ನ ಲಾಯರ್ ಆಗಿದ್ರಿ.