- ಗಾಯಗಳಾದಾಗ ಜೇನುತುಪ್ಪವನ್ನು ಹಚ್ಚುತ್ತಾ ಬಂದರೆ ಗಾಯದ ಕಲೆಗಳು ನಿಲ್ಲುವುದಿಲ್ಲ. ಬೇವಿನ ಸೊಪ್ಪನ್ನು ಅರೆದು ಹಚ್ಚುವುದರಿಂದ ಗಾಯ ಗುಣವಾಗುತ್ತದೆ.
- ಗಾಯವಾಗಿ ಊತವಿದ್ದಾಗ ಬಿಸಿಯಾದ ಹುಣಸೇ ಗೊಜ್ಜಿನ ಕಾಪಟ ಗುಣಕಾರಿ, ಓಮಿನ ಕಾಳನ್ನು ಎಣ್ಣೆಯಲ್ಲಿ ಹಾಕಿ ಕಾಯಿಸಿ ಅದನ್ನು ಲೇಪನ ಮಾಡಿದರೆ ನೋವು ಬಾವು ನಿವಾರಣೆ ; ನಿಂಬೆರಸದಲ್ಲಿ ಓಮು ಅರೆದು ಊತವಾಗಿರುವ ಜಾಗಕ್ಕೆ ಪಟ್ಟು ಹಾಕಬಹುದು ಎಳ್ಳೆಣ್ಣೆಯನ್ನು ಗಾಯಕ್ಕೆ ಹಚ್ಚಿದರೆ ಗಾಯ ಮಾಯುವುದು.
- ಸುಟ್ಟಗಾಯಕ್ಕೆ ಜೇನುತುಪ್ಪ ಸವರುತ್ತಿದ್ದರೆ ಮಾಯುವುದು. ಆಲೂಗಡ್ಡೆ ಬೇಯಿಸಿದ ನೀರಿನಿಂದ ತೊಳೆದು ಅದನ್ನು ನುಣ್ಣಗೆ ಅರೆದು ಹಚ್ಚುವುದರಿಂದ ಗುಣವಾಗುವುದು.ಅದಕ್ಕೆ ಅರಿಶಿನ ಪುಡಿಯನ್ನು ಬೆರೆಸಿದ ಪೇಸ್ಟ್ ಅನ್ನು ಗಾಯದ ಮೇಲೆ ಹಚ್ಚಿದರೆ ಗುಣವಾಗುವುದು.
- ಏಟು ಬಿದ್ದು ಊದಿದ ಭಾಗಕ್ಕೆ ನುಗ್ಗೆ ಸೊಪ್ಪಿನ ಶಾಖ ಕೊಟ್ಟರೆ ಗುಣ ಕಂಡುಬರುತ್ತದೆ.ಶ್ರೀಗಂಧದ ಚೆಕ್ಕೆಯನ್ನು ತೇದು ಗಾಯಗಳಿಗೆ ಲೇಪಿಸಿದರೆ ಗುಣವಾಗುತ್ತದೆ. ಅದರ ಶಾಖ ಕೊಟ್ಟರೆ ಊತ ನಿವಾರಣೆಯಾಗುತ್ತದೆ.
- ಯಾವ ಗಾಯವಾದರೂ ಸ್ವಮೂತ್ರದಿಂದ ತೊಳೆದು,ಅದನ್ನು ಅಗಾಗ ಅದರ ಮೇಲೆ ಹಚ್ಚುತ್ತಿದ್ದರೆ ಶ್ರೀಘ್ರ ಮಾಯವಾಗುತ್ತದೆ.
- ಅರಿಶಿನದ ಜೊತೆಯಲ್ಲಿ ಸಬ್ಬಸಿಗೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ಊತ ನೋವು ನಿವಾರಣೆ ಆಗುವುದು.
- ಬೇವಿನ ಎಲೆ ಗರಿಕೆ, ಎಳ್ಳು ಸೇರಿಸಿ, ಅರಿಶಿನ ಕರ್ಪೂರ ಮಿಶ್ರ ಮಾಡಿ ಗಾಯಗಳಿಗೆ ಲೇಪಿಸಿದರೆ ಮಾಯುವುದು
- ಮಾವಿನ ಎಲೆ ಸುಟ್ಟು ಭಸ್ಮವನ್ನು ರಕ್ತ ಸೋರುವಾಗ ಹಾಕಿದರೆ ರಕ್ತ ಕಟ್ಟುತ್ತದೆ.
- ಹೊಂಗೆಬೀಜ, ಹಿಪ್ಪೇಬೀಜ, ಬೆಳ್ಳುಳ್ಳಿ ಅರೆದು ಗಾಯಕ್ಕೆ ಕಟ್ಟುವುದರಿಂದ ಬೇಗ ಗುಣವಾಗುವುದು.
- ಪರಂಗಿ ಕಾಯಿಯ ಹಾಲು ಗಾಯದ ಮೇಲೆ ಸವರುವುದು. ಬಾಳೇಕಾಯಿ ಕತ್ತರಿಸಿದ ದ್ರವಗಳು ಕಾಯದ ಮೇಲೆ ಲೇಪಿಸುವುದರಿಂದ ಗುಣವಾಗುವುದು.