ಡಯಾಬಿಟೀಸ್ ಗೆ ಕಾರಣಗಳು
★ಅನುವಂಶೀಯತೆ
★ಹೆಚ್ಚಿನ ತೂಕ, ಹೆಚ್ಚಿಗೆ ತಿನ್ನುವುದರಿಂದ
★ಶರೀರ ಶ್ರಮವಿಲ್ಲದೆ ಇರುವುದರಿಂದ
★ಮಾನಸಿಕ ಒತ್ತಡಗಳು
★ ಕೆಲವು ಬಗೆಯ ಔಷಧಿಗಳಿಂದ
★ವಯಸ್ಸಿನಿಂದಾಗಿ ಪದೇ ಪದೇ ಅಂಟುರೋಗಗಳು ಬರುವುದರಿಂದ.
ಅಧಿಕ ತೂಕ
★ಟೈಪ್ ಟೂ ಡಯಾಬಿಟೀಸ್ ಇವರಲ್ಲಿ ಇರುವವರಲ್ಲಿ ಎಂಬ ಶೇಕಡಾ 80 ಮಂದಿ ಹೆಚ್ಚು ತೂಕವುಳ್ಳವರೇ ಆಗಿರುತ್ತಾರೆ.ಇಲ್ಲಿ ಸಮಸ್ಯೆ ತೂಕದ್ದಲ್ಲ. ಆ ತೂಕ ಯಾವ ಯಾವ ಭಾಗಗಳಲ್ಲಿ ಕೇಂದ್ರೀಕೃತವಾಗಿದೆ ಎನ್ನುವುದು ಡಯಾಬಿಟಿಸ್ ಬರಲು ಕಾರಣವಾಗಿರುತ್ತದೆ.
★ಮುಖ್ಯವಾಗಿ ಹೊಟ್ಟೆಯ ಭಾಗ ಬೆಳೆದವರಿಗೆ ಈ ವ್ಯಾಧಿ ಬರುವ ಸಂಭವ ಹೆಚ್ಚು.
★ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದವರಿಗೆ ಹೊಟ್ಟೆ ಬರುತ್ತದೆ ಈ ಕಾರಣದಿಂದ ಮಧ್ಯವಯಸ್ಸಿನಿಂದ ಟೈಪ್ ಟು ಡಯಾಬಿಟಿಸ್ ಬರಲು ಹೆಚ್ಚಿನ ಅವಕಾಶವಿದೆ.
★ಆದರೆ ಇಂದಿನ ದಿನಗಳಲ್ಲಿ 25 30 ವರ್ಷಗಳ ನಡುವಿನ ಯುವಕರಿಗೂ ಕೂಡಾ ಬೊಜ್ಜು ಹೊಟ್ಟೆ ಕಂಡುಬರುತ್ತದೆ.ಆದ್ದರಿಂದ ಈ ವಯಸ್ಸಿನವರಲ್ಲಿಯೂ ಕೂಡ ಈ ನಡುವೆ ಡಯಾಬಿಟಿಸ್ ಕಂಡುಬರುತ್ತಿದೆ.
ಶರೀರಕ್ಕೆ ಶ್ರಮ:-
★ ಕ್ರಮಬದವಾಗಿ ವ್ಯಾಯಾಮಗಳನ್ನು ಮಾಡುವುದು.ಶರೀರಕ್ಕೆ ಶ್ರಮ ಕೊಡುವುದರಿಂದ ಸ್ತೂಲ ದೇಹ ಉಂಟಾಗುವುದಿಲ್ಲ.
★ವ್ಯಾಯಾಮಗಳನ್ನು ಮಾಡದವರು ಡಯಾಬಿಟೀಸ್ ಗೆ ಈಡಾಗುವ ಸಂಭವವಿದೆ.
ಕೆಲವು ಬಗೆಯ ಔಷಧಗಳು :-
★ ಕೆಲವು ಬಗೆಯ ಔಷಧಗಳು ಶರೀರದಲ್ಲಿನ ಬ್ಲಡ್ ಷುಗರ್ ನ್ನು ವೃದ್ಧಿಸುತ್ತವೆ. ಬೆಳಸಿ, ಡಯಾಬಿಟೀಸ್ ಬರಲು ದಾರಿ ಮಾಡಿಕೊಡುತ್ತವೆ
★ಅಂತಹ ಔಷಧಗಳಲ್ಲಿ ಮುಖ್ಯವಾದವು ಕಾರ್ಟಿಸೋನ್ ಗುಂಪಿಗೆ ಸೇರಿದ ಔಷಧಗಳು ಸ್ವೆರಾಯಿಡ್ಸ್.
★ಶರೀರದಲ್ಲಿನ ನೀರನ್ನು ಹೊರ ಹಾಕುವ ಮೂತ್ರ ವರ್ಧಕಗಳು ಕೂಡಾ, ಡಯಾಬಿಟೀಸ್ ಬರಲು ಕೆಲವು ಸಂದರ್ಭಗಳಲ್ಲಿ ಕಾರಣವಾಗುತ್ತವೆ.
ಅಂಟು ರೋಗಗಳು
ಪದೇ ಪದೇ ಅಂಟುರೋಗಗಳು ಬರುತ್ತಿದ್ದರೆ ಆ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ. ರೋಗನಿರೋಧಕ ವ್ಯವಸ್ಥೆ ಬಲಹೀನಗೊಳ್ಳುವುದರಿಂದ ಅಂಟುರೋಗಗಳು ಬರುತ್ತವೆ ನ್ನುವುದು ಕೂಡಾ ಮತ್ತೊಂದು ವಿಷಯ ಇಂತಹವರಿಗೆ.ಡಯಾಬಿಟೀಸ್ ಬಹಳ ಸುಲಭವಾಗಿ ಬರುತ್ತದೆ.
ಕಾಂಪ್ಲಿಕೇಷನ್ :-
★ ಡಯಾಬಿಟಿಸ್ ಇರುವ ವ್ಯಕ್ತಿ ಅನೇಕ ರೋಗಗಳನ್ನು ಆಹ್ವಾನಿಸುತ್ತಿರುತ್ತಾನೆ. ಡಯಾಬಿಟಿಸ್ ಕಾರಣದಿಂದಾಗಿ ಶರೀರದಲ್ಲಿನ ಎಲ್ಲ ಅವಯ ವಗಳಿಗೂ ಅಪಾಯವಿದ್ದರೂ ಮುಖ್ಯವಾಗಿ ಕಣ್ಣುಗಳು, ಮೂತ್ರಪಿಂಡಗಳು ಕಿಡ್ನಿಗಳು ರಕ್ತನಾಳಗಳು, ನರಗಳು ಹೃದಯ ಮೊದಲಾದ ಭಾಗಗಳಿಗೆ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ.
★ಒಂದು ಬಾರಿ ಅವಯವಗಳಲ್ಲಿ ಯಾವುದಾದರೂ ಹಾನಿಗೊಳಗಾಗಿವೆಯೆಂದು. ತೀರ್ಮಾನವಾದರೆ,ಅವುಗಳನ್ನು ಸರಿಪಡಿಸುವುದು ಬಹಳ ಕಷ್ಟಸಾದ್ಯವಾಗುತ್ತದೆ.ಅಷ್ಟೇ ಅಲ್ಲದೆ ರೋಗಿ ವಿಪರೀತ ನೋವಿಗೀಡಾಗುತ್ತಾನೆ ವೆಚ್ಚವೂ ಸಹ ಬಹಳವಾಗಿರುತ್ತದೆ.
★ಈ ಕಾರಣದಿಂದ ಸಮಯ ಮೀರಿ ಹೋಗುವವರೆಗೂ ನಿರ್ಲಕ್ಷ್ಯ ಮಾಡದೆ.ಡಯಾಬಿಟಿಸ್ ನ್ನು ಆಗಿಂದಾಗ ಔಷಧಗಳ ಮೂಲಕ ವೂ,ಆಹಾರದ ಜಾಗರೂಕತೆಯ ಮೂಲಕವೂ, ವ್ಯಾಯಾಮಗಳ ಮೂಲಕವೂ ನಿಯಂತ್ರಿಸಿ ಕೊಳ್ಳುತ್ತಾ ಆಯಾ ರೋಗಗಳು,ಅವುಗಳ ಲಕ್ಷಣಗಳು ಹತ್ತಿರ ಬರದಂತೆ ನೋಡಿಕೊಳ್ಳುವುದು ಉತ್ತಮ.
★ಡಯಾಬಿಟಿಸ್ ನಿಂದ ಉಂಟಾಗುವ ಜಟಿಲತೆಗಳು ಎರಡು ಬಗೆಯಾಗಿರುತ್ತದೆ. ಅವು ಅವು :
1. ಆಗಿಂದಾಗಲೇ ಬರುವ ಆಕ್ಯೂಟ್ ಕಾಂಪ್ಲಿಕೇಷನ್ :- ಇವು ಸೋಂಕುಗಳಿಗೀಡಾಗುವುದು ಡಯಾಬಿಟಿಸ್ ಕೋಮಾ ಎಂದು ಕರೆಯಲ್ಪಡುವ ಇದರೊಳಗೆ ಬರುತ್ತವೆ. ಈ ಎರಡನೆಯದನ್ನು ಕುರಿತು ನಂತರದ ಅಧ್ಯಾಯದಲ್ಲಿ ನೋಡೋಣ.
2. ದೀರ್ಘಕಾಲವಿದ್ದು ಬೇರೂರಿ ಹೋಗುವ ಕ್ರಾನಿಂಗ್ ಕಾಂಪ್ಲಿಕೇಶನ್ ಗಳು :
ಕಣ್ಣುಗಳು ಪಾದಗಳು, ಮೂತ್ರಪಿಂಡಗಳು, ಹೃದಯ ಮುಂತಾದವುಗಳಿಗೆ ಹಾನಿಯಾಗುವುದು ಇದರಲ್ಲಿ ಬರುತ್ತವೆ ಈಗ ಇವುಗಳಲ್ಲಿ ಒಂದೊಂದರ ಕುರಿತು ನೋಡೋಣ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.