ಮನೆ ಅಪರಾಧ ಕೋಲ್ಕತ್ತ: ಕಾರ್ಖಾನೆಯಲ್ಲಿ ಅಗ್ನಿ ಅವಘಡ- 30 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

ಕೋಲ್ಕತ್ತ: ಕಾರ್ಖಾನೆಯಲ್ಲಿ ಅಗ್ನಿ ಅವಘಡ- 30 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

0

ಕೋಲ್ಕತ್ತ: ಇಲ್ಲಿನ ದಮ್ ದಮ್ ಪ್ರದೇಶದಲ್ಲಿರುವ ಒಳ‍ಉಡುಪು ತಯಾರಿಕಾ ಘಟಕದಲ್ಲಿ ಶುಕ್ರವಾರ ಮುಂಜಾನೆ ಹಾಗೂ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ನಗರ್‌ ಬಜಾರ್‌ ನ ಜೆಸೋರ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮುಂಜಾನೆ 3ಗಂಟೆಗೆ ಅನಾಹುತ ನಡೆದಿದ್ದು, ಯಾವುದೇ ಸಾವು ನೋವಿನ ವರದಿಯಾಗಿಲ್ಲ.

ಪಕ್ಕದಲ್ಲೇ ಇರುವ ಐಸ್‌ ಕ್ರೀಂ ಕಾರ್ಖಾನೆಯಿಂದ ಬೆಂಕಿ ಹರಡಿದೆ ಎಂದು ಶಂಕಿಸಲಾಗಿದೆ. ಬೆಂಕಿ ನಂದಿಸಲು ಸುಮಾರು 30 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿಗೆ ಸ್ಥಳೀಯರು ಕೂಡ ಸಹಾಯ ಮಾಡಿದ್ದು, ಸತತ ಏಳು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ.

ಬೆಂಕಿ ಹತ್ತಿಕೊಳ್ಳುವ ಸಾಧನಗಳು ಇದ್ದಿದ್ದರಿಂದ ವೇಗವಾಗಿ ಬೆಂಕಿ ಪಸರಿಸಿದೆ. ಕೆಲವೊಂದು ಸ್ಫೋಟಕಗಳು ಕೂಡ ಕಟ್ಟಡದೊಳಗಿದ್ದವು. ನಮ್ಮ ಸಿಬ್ಬಂದಿ ಅದನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಕೆಲಹೊತ್ತು ಬೇಕಾಗಬಹು. ಬೆಂಕಿ ಅವಘಡಕ್ಕೆ ನಿಖರ ಕಾರಣ ಪತ್ತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸ್ಥಳದಲ್ಲಿ ಹಲವು ಗೋದಾಮುಗಳು ಹಾಗೂ ಉತ್ಪಾದನಾ ಘಟಕಗಳಿದ್ದು, ಬೆಂಕಿ ಹರಡುವುದನ್ನು ತಡೆಯುವುದು ಅಗ್ನಿ ಶಾಮಕ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.  ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿದೆ.