ಶರಣಂ ಶರಣಂ ಶರಣಂ ಶರಣಂ
ಏನು ಶಕ್ತಿ ಅಡಗಿದೆಯೋ ನಿನ್ನ ಹೆಸರಲ್ಲಿ
ಏನು ಮಹಿಮೆ ತುಂಬಿದೆಯೋ ಸ್ವಾಮಿ ನಿನ್ನಲ್ಲಿ ||
ಮುಳ್ಳ ಮೇಲೆ ಕಾಲಿರಲಿ
ಕಲ್ಲ ಮೇಲೆ ನಡೆದಿರಲಿ||
ಅಯ್ಯೋ ನೋವು ಎನ್ನುತಿರಲಿ ತಾಳಲಾರೆ ಎನಿಸಿರಲಿ |
ಅಯ್ಯಪ್ಪ ಎಂದಾಗ ಏನೋ ಆನಂದ ||
ನಮ್ಮಪ್ಪ ನಾ ಕಾಣಿ ಅನುಬಂಧ ||ಏನು ಶಕ್ತಿ ||
ಕಾಡಿನಲ್ಲೆ ನಾನಿರಲಿ ಇರುಳು ಸುತ್ತ ತುಂಬಿರಲಿ ||
ದಾರಿ ಕಾಣದಾಗಿರಲಿ ಮೃಗದ ಕೂಗೆ ಕೇಳಿರಲಿ |
ಅಯ್ಯಪ್ಪ ಎಂದಾಗ ಭಯದ ಮಾತಿಲ್ಲ ||
ನಮ್ಮಪ್ಪ ಎಂದಾಗ ಮಿಂಚು ಮೈಲೆಲ್ಲ || ಏನು ಶಕ್ತಿ ||
ಕರೆಸಿಕೊಳುವನು ನೀನೆ
ಕಳಿಸಿಕೊಂಡವನು ನೀನೆ ||
ನಾನು ಎಂಬ ಮಾತಲ್ಲಿ ನನ್ನ ಉಸಿರು ನೀನು ತಾನೆ ||
ಅಯ್ಯಪ್ಪ ಎಂದಾಗ ಏನೋ ಉಲ್ಲಾಸ ||
ನಮ್ಮಪ್ಪ ಎಂದಾಗ ಅಲ್ಲೆ ಕೈಲಾಸ ||ಏನು ಶಕ್ತಿ ||
ಶರಣಂ ಶರಣಂ ಅಯ್ಯಪ್ಪ || 2 ||
ಸ್ವಾಮಿಯೇ ಶರಣಂ ಶರಣಂ ಅಯ್ಯಪ್ಪ || 2 ||
ಶರಣಂ ಶರಣಂ ಅಯ್ಯಪ್ಪ || 2 ||