ಮನೆ ರಾಜ್ಯ ಆಪ್ ಸೇರಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ

ಆಪ್ ಸೇರಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ

0

ಬೆಂಗಳೂರು(Bengaluru): ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಗುರುವಾರ ಅಧಿಕೃತವಾಗಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ ಮತ್ತು ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿರುವ ಆಪ್ ಗೆ ಟೆನ್ನಿಸ್ ಕೃಷ್ಣರನ್ನು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬರಮಾಡಿಕೊಂಡರು.

ಪಕ್ಷಕ್ಕೆ ಸೆರ್ಪಡೆಯಾದ ಬಳಿಕ ಟೆನ್ನಿಸ್‌ ಕೃಷ್ಣ ಮಾತನಾಡಿ, ಅಧಿಕಾರಕ್ಕಾಗಿ ಪಕ್ಷಕ್ಕೆ ಸೇರಿಲ್ಲ. ಜನಸೇವೆಗಾಗಿ ಸೇರಿದ್ದೇನೆ ಎಂದು ಹೇಳಿದರು.

ಈ ಹಿಂದೆ ಮತ್ತೊಬ್ಬ ಹಾಸ್ಯನಟ ಮುಖ್ಯಮಂತ್ರಿ ಚಂದ್ರು ಕೂಡ ಎಎಪಿ ಸೇರಿದ್ದಾರೆ. ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೃಥ್ವಿ ರೆಡ್ಡಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.

ಹಿಂದಿನ ಲೇಖನಖಾಸಗಿ ಶಾಲಾ ಬಸ್ ಅಪಘಾತ: ಪ್ರಾಣಾಪಾಯದಿಂದ ವಿದ್ಯಾರ್ಥಿಗಳು ಪಾರು
ಮುಂದಿನ ಲೇಖನಕರ್ನಾಟಕದಲ್ಲಿ ಆರ್ ಆ್ಯಂಡ್ ಡಿ ನೀತಿಗೆ ಅನುಮೋದನೆ: ಸಿಎಂ ಬಸವರಾಜ ಬೊಮ್ಮಾಯಿ