ಮನೆ ಮನರಂಜನೆ ಕಾಲಿವುಡ್‌ ನಟ ಅಜಿತ್‌ ಕುಮಾರ್‌’‌ಗೆ  ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್

ಕಾಲಿವುಡ್‌ ನಟ ಅಜಿತ್‌ ಕುಮಾರ್‌’‌ಗೆ  ಪ್ರಶಾಂತ್ ನೀಲ್‌ ಆ್ಯಕ್ಷನ್ ಕಟ್

0

ಚೆನ್ನೈ: ಪ್ಯಾನ್‌ ಇಂಡಿಯಾ ನಿರ್ದೇಶಕ ಪ್ರಶಾಂತ್‌ ನೀಲ್‌   ಭಾರತೀಯ ಸಿನಿರಂಗದಲ್ಲಿ ʼಕೆಜಿಎಫ್‌ʼ ಸರಣಿ ಹಾಗೂ ಇತ್ತೀಚೆಗೆ ʼಸಲಾರ್‌ʼ ಮೂಲಕ ಮೋಡಿ ಮಾಡಿರುವ ನಿರ್ದೇಶಕ.

Join Our Whatsapp Group

ʼಸಲಾರ್‌-2ʼ   ತಯಾರಿಯಲ್ಲಿ ನಿರತರಾಗಿರುವ ಪ್ರಶಾಂತ್‌ ಜೋಳಿಗೆಯಲ್ಲಿ ಇದಾದ ಬಳಿಕ ʼಕೆಜಿಎಫ್-3‌ʼ ಹಾಗೂ ಜೂ.ಎನ್‌ಟಿಆರ್ ಅವರೊಂದಿಗಿನ ಸಿನಿಮಾ ಸಾಲಿನಲ್ಲಿದೆ. ಇದರಲ್ಲಿ ʼಸಲಾರ್‌-2ʼ ಬಳಿಕ ಅವರು ಜೂ.ಎನ್‌ ಟಿಆರ್‌ ಸಿನಿಮಾ ಮಾಡುವ ಸಾಧ್ಯತೆಯಿದೆ.

ಇದೀಗ ಕಾಲಿವುಡ್‌ ನಟ, ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್‌ ಇತ್ತೀಚೆಗೆ ಪ್ರಶಾಂತ್‌ ನೀಲ್‌ ಅವರನ್ನು ಭೇಟಿ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.

ಅಜಿತ್ ಕುಮಾರ್ ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಭೇಟಿ ಮಾಡಿ ಎರಡು ಬಿಗ್‌ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ʼಡಿಟಿ ನೆಕ್ಸ್ಟ್‌ʼ ವರದಿ ಮಾಡಿದೆ.

 ‘ವಿದಾ ಮುಯರ್ಚಿ’ ಚಿತ್ರೀಕರಣದಿಂದ ವಿರಾಮದಲ್ಲಿರುವಾಗ ಅಜಿತ್‌ – ನೀಲ್‌ ಭೇಟಿ ಆಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಅಜಿತ್ ಬಳಿ ಪ್ರಶಾಂತ್ ಮೂರು ವರ್ಷಗಳ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಪ್ರಶಾಂತ್‌ ನೀಲ್‌ ಅಜಿತ್‌ ಅವರೊಂದಿಗೆ ಎರಡು ಸಿನಿಮಾಗಳನ್ನು ಮಾಡಲಿದ್ದು, ʼಎಕೆ64ʼ ಪ್ರತ್ಯೇಕ ಕಥೆಯನ್ನೊಳಗೊಳ್ಳಲಿದ್ದು, ಎರಡನೇ ಪ್ರಾಜೆಕ್ಟ್‌  ʼಎಕೆ65ʼ ಅಥವಾ ʼಎಕೆ66ʼ ಕಥೆಯು ʼಕೆಜಿಎಫ್-3‌ʼಗೆ (KGF-3) ಕನೆಕ್ಟ್‌ ಆಗಲಿದೆ ಎಂದು ವರದಿ ತಿಳಿಸಿದೆ.

2025ರಲ್ಲಿ ಈ ಎರಡು ಪ್ರಾಜೆಕ್ಟ್‌ ಗಳು ಅನೌನ್ಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸದ್ಯ ಅಜಿತ್‌ ಕುಮಾರ್‌ ಮಾಗಿಜ್ ತಿರುಮೇನಿ ಅವರ ‘ವಿದಾ ಮುಯರ್ಚಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗುವ ಸಾಧ್ಯತೆಯಿದೆ. ಇದಾದ ನಂತರ ಅಜಿತ್‌ ಅಧಿಕ್ ರವಿಚಂದ್ರನ್ ಅಭಿನಯದ ‘ಗುಡ್ ಬ್ಯಾಡ್ ಆಗ್ಲಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.