ಮನೆ ಮಾನಸಿಕ ಆರೋಗ್ಯ ಅಂಗ ದೋಷದ ಚಿತ್ತ ವಿಕಲತೆ

ಅಂಗ ದೋಷದ ಚಿತ್ತ ವಿಕಲತೆ

0

     ಮಿದುಳಿನಲ್ಲಿ ಆಗುವ, ಗುರುತಿಸಬಹುದಾದ ಬದಲಾವಣೆಗಳಿಂದ ಬರುವ ಈ ವಿಕಲತೆ ಇದ್ದಕ್ಕಿದ್ದಂತೆ ಬಂದು ಸ್ವಲ್ಪ ಕಾಲ ಇರಬಹುದು ಅಥವಾ ಸ್ವಲ್ಪ ಸ್ವಲ್ಪವಾಗಿ ನಿಧಾನವಾಗಿ ಬಂದು ಬಹಳ ಕಾಲ ಇರಬಹುದು.

Join Our Whatsapp Group

     ಟೈಫಾಯಿಡ್ ಜ್ವರ,ಮಲೇರಿಯಾ ಮುಂತಾದ ಕಾಯಿಲೆಗಳಲ್ಲಿ ಜ್ವರ ಭರಿತವಾದಾಗ, ರೋಗಿ ಬುದ್ದಿ ಭ್ರಮೆಣೆಗೀಡಾಗಿ  ಸಿಕ್ಕಾಪಟ್ಟೆ ಬಾಯಿಗೆ ಬಂದಂತೆ ಮಾತನಾಡುವುದು, ಜ್ಞಾನವಿಲ್ಲದೆ ತಾನೆಲ್ಲಿದ್ದೇನೆ ಎಂದು ಗೊಂದಲಕ್ಕೀಡಾಗಿ, ಮನೆಯವರನ್ನು ಗುರುತಿಸುತ್ತಿರುವುದು, ಭಯಪಡುವುದು ಸುಮ್ಮನಿರದೆ  ಚರಿಪಡಿಸುವುದು, ಹಾಸಿಗೆ ಬಿಟ್ಟು ಏಳುವುದು, “ನೋಡಿ ಯಾರೋ ಬರುತ್ತಿದ್ದಾರೆ ಆಯುಧಗಳ ಹಿಡಿದುಕೊಂಡಿದ್ದಾರೆ. ನನ್ನನ್ನು ಕೊಂದು ಬಿಡ್ತಾತ್ತಾರೆ ” ಮುಂತಾಗಿ ಬಡಪಡಿಸುವುದು ಇತ್ಯಾದಿ ಹುಚ್ಚುಚ್ಚಾಗಿ ಆಡಬಹುದು. ಇದಕ್ಕೆ ಸನ್ನಿ ಡೆಲಿರಿಯಂ ಎನ್ನುತ್ತಾರೆ.

     ಮದ್ಯಪಾನ ಚಟ ಅಥವಾ ಗಾಂಜಾ, ಆಫೀಮು ಪೆಥಿಡಿನ್ ಮಾದಕ ವಸ್ತುಗಳಿಗೆ ಚಟ ಬೆಳೆಸಿಕೊಂಡಿರುವವರು ವಿಕಲತೆಗೀ ಡಾಗಬಹುದು.ಚಿತ್ತವಿಕಲತೆಯ ಚಿಹ್ನೆಗಳ ಜೊತೆಗೆ, ಕೈ ನಡುಕ, ಮೆರವು ಗೊಂದಲಕ್ಕೀಡಾಗಿ ಹಿಂಸಾಚಾರಕ್ಕೆ  ಇಳಿಯಬಹುದು.

    ಅನೇಕ ತೀವ್ರವಾದ ಶರೀರಕ ಖಾಯಿಲೆಗಳಲ್ಲಿ ರೋಗಿಗೆ ಬುದ್ದಿ ಭ್ರಮೆಣೆ ಆಗಬಹುದು. ಅತ ಆರೆ ಪ್ರಜ್ಞಾವಸ್ಥೆಯಲ್ಲಿದ್ದು. ಜಡಪಡಿಸಬಹುದು, ಭಯಪಡಬಹುದು, ನಿದ್ರೆ ಮಾಡದಿರಬಹುದು,ಮೂಗಿನೊಳಗೆ ಹಾಕಿದ ಕೊಳವೆಯನ್ನು ಗಾಯದ ಪಟ್ಟಿಗಳನ್ನು ಹೊದಿಕೆಯನ್ನು ಕಿತ್ತೆಸೆಯಬಹುದು, ಯಾವುದೇ ತೀವ್ರ ಸುಂಕಾದಗ ಲಿವರ್, ಮೂತ್ರ ಜನಾಕಾಂಗ ಅಥವಾ ಹೃದಯ ವಿಫಲವಾದಾಗ ವಿಷ ಸೇವನೆ ಮಾಡಿದಾಗ, ತಲೆಗೆ ಬಿಟ್ಟು ಬಿದ್ದಾಗ, ಮೂಳೆ ಮುರಿದುಕೊಂಡಾಗ ವಿಕಲತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಕ್ಕರೆ ಖಾಯಿಲೆ ವಿಪರಿತವಾದಾಗ ಅಥವಾ ಜಾಸ್ತಿ ಇನ್ಸುಲಿನ್ ತೆಗೆದುಕೊಂಡು ರಕ್ತದಲ್ಲಿ ಸಕ್ಕರೆ ಪ್ರಮಾಣ ತೀವ್ರ ಕಡಿಮೆಯಾದಾಗ ಕೂಡ ಬುದ್ಧಿಪ್ರಮೇಯ ಆಗುತ್ತದೆ. ಕೆಲವು ಮೂರ್ಛೆ ರೋಗಿಗಳು ಮೂರ್ಛೆ ಬಂದು ಬಿಟ್ಟ ನಂತರ ಸ್ವಲ್ಪ ಹೊತ್ತು ಹುಚ್ಚುಚ್ಚಾಗಿ ಆಡುತ್ತಾರೆ. ಮಿದುಳು ಉರಿತ, ಮೆದುಳ ಪೊರೆ ಉರಿತದಿಂದ ಅಥವಾ ಮೆದುಳ ನಲ್ಲಿ ಕಿವು ತುಂಬಿ ಬರುವ ಮೆದುಳ ಜ್ವರಗಳಲ್ಲಿ ಬುದ್ದಿ ಭ್ರಮೆಣೆ ಸಾಮಾನ್ಯ ಇಲ್ಲವೇ ಶೀಘ್ರವಾಗಿ ಬಂದು ಸ್ವಲ್ಪ ಕಾಲ ಇರುವ ಅಂಗದೋಷ ಚಿತ್ತ ವಿಕಲತೆಯ ಉದಾಹರಣೆಗಳು.

    ಈ ಖಾಯಿಲೆಗಳಿಗೆ ಚಿಕಿತ್ಸೆ ಎರಡು ವಿಧ. ವ್ಯಕ್ತಿಗೆ ಬಂದಿರುವ ಶಾರೀರಿಕ ಕಾಯಿಲೆಗೆ ಮತ್ತು ವಿಕಲತೆಗೆ ಎರಡಕ್ಕೂ ಚಿಕಿತ್ಸೆ ನಡೆಯಬೇಕು. ಆದ್ದರಿಂದ ಸಹಜವಾಗಿ ಈ ರೋಗಿಗಳು ಆಸ್ಪತ್ರೆಗೆ ಸೇರಬೇಕಾಗುತ್ತದೆ. ಈ ರೋಗಿಗಳಿಗೆ ದಿನದ 24 ಘಂಟೆಗಳೂ ಅವಿರಿತವಾಗಿ ಒಳ್ಳೆಯ ಶುಶ್ರೂಷೆ ಮತ್ತು ವೈದ್ಯಕೀಯ ನೆರವು ದೊರಕಬೇಕು.