ಮನೆ ಮನರಂಜನೆ ಆಗಸ್ಟ್‌ 9ಕ್ಕೆ “ಭೀಮ” ತೆರೆ: ನಿರೀಕ್ಷೆ ಹೆಚ್ಚಿಸಿದ ಟ್ರೇಲರ್‌

ಆಗಸ್ಟ್‌ 9ಕ್ಕೆ “ಭೀಮ” ತೆರೆ: ನಿರೀಕ್ಷೆ ಹೆಚ್ಚಿಸಿದ ಟ್ರೇಲರ್‌

0

ಸ್ಯಾಂಡಲ್‌ವುಡ್‌ ಸೆಕೆಂಡ್‌ ಹಾಫ್ ಸಂಭ್ರಮ ಶುರುವಾಗಿದೆ. ಮೊದಲ ಏಳು ತಿಂಗಳು ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ ನಿಜ. ಆದರೆ, ಈಗ ಚಂದನವನ ತನ್ನ ಕಂಪು ಸೂಸಲು ಸಿದ್ಧವಾಗಿದೆ.

Join Our Whatsapp Group

ಆಗಸ್ಟ್‌ 9ರಿಂದಲೇ ಸ್ಟಾರ್‌ ಸಿನಿಮಾಗಳ ಜಾತ್ರೆ ಆರಂಭವಾಗಿದೆ. ಮತ್ತೆ ಪ್ರೀ ರಿಲೀಸ್‌ ಇವೆಂಟ್‌ ಗಳು, ಕಲರ್‌ಫ‌ುಲ್‌ ಕಾರ್ಯಕ್ರಮಗಳ ಮೂಲಕ ಚಿತ್ರರಂಗದ ಮಂದಿ ಒಂದಾಗುತ್ತಿದ್ದಾರೆ. ಅದರ ಮೊದಲ ಹಂತವಾಗಿ “ದುನಿಯಾ’ ವಿಜಯ್‌ ನಟನೆ, ನಿರ್ದೇಶನದ “ಭೀಮ’ ಸಿನಿಮಾದ ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ಇತೀಚೆಗೆ ಅದ್ಧೂರಿಯಾಗಿ ನಡೆಯಿತು.

ನಟ ಶಿವರಾಜ್‌ಕುಮಾರ್‌ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭಕೋರಿದರು. ಔಟ್‌ ಅಂಡ್‌ ಮಾಸ್‌ ಅಂಶಗಳೊಂದಿಗೆ ಮೂಡ ಬಂದಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರಿದೆ. ಟ್ರೇಲರ್‌ ನೋಡಿದವರು ಸಿನಿಮಾದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.

ಚಿತ್ರವನ್ನು ಜಗದೀಶ್‌ ಗೌಡ ಹಾಗೂ ಕೃಷ್ಣ ಸಾರ್ಥಕ್‌ ನಿರ್ಮಿಸಿದ್ದಾರೆ. ಆಗಸ್ಟ್‌ 9ಕ್ಕೆ ತೆರೆಕಾಣುವ “ಭೀಮ’ ಕನ್ನಡ ಚಿತ್ರರಂಘಕ್ಕೆ “ಬಲ’ ತುಂಬುತ್ತಾನೆ ಎಂಬ ನಿರೀಕ್ಷೆ ಹೆಚ್ಚಾಗಿದೆ.