ಮನೆ ಉದ್ಯೋಗ ಸಿ-ಡಾಕ್​ ನೇಮಕಾತಿ: ಬೆಂಗಳೂರಿನಲ್ಲಿ ಪ್ರಾಜೆಕ್ಟ್​ ಅಸೋಸಿಯೇಟ್ ಸೇರಿ ಹಲವು​​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಿ-ಡಾಕ್​ ನೇಮಕಾತಿ: ಬೆಂಗಳೂರಿನಲ್ಲಿ ಪ್ರಾಜೆಕ್ಟ್​ ಅಸೋಸಿಯೇಟ್ ಸೇರಿ ಹಲವು​​ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಬೆಂಗಳೂರು: ಕೇಂದ್ರ ಸರ್ಕಾರದ ಸೆಂಟರ್​ ಫಾರ್​ ಡೆವಲಪ್‌ಮೆಂಟ್‌ ಆಫ್​ ಅಡ್ವಾನ್ಸ್ಡ್​​ ಕಂಪ್ಯೂಟಿಂಗ್​ (ಸಿ-ಡಾಕ್​) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು, ಪುಣೆ, ದೆಹಲಿ, ಲಕ್ನೋದಲ್ಲಿ ನೇಮಕಾತಿ ನಡೆಯಲಿದೆ.

Join Our Whatsapp Group

ಹುದ್ದೆಗಳ ವಿವರ: ಪ್ರಾಜೆಕ್ಟ್​​ ಅಸೋಸಿಯೇಟ್​​, ಪ್ರಾಜೆಕ್ಟ್​ ಇಂಜಿನಿಯರ್​​, ಪ್ರೊಜೆಕ್ಟ್​​ ಮ್ಯಾನೇಜರ್​, ಪ್ರಾಜೆಕ್ಟ್​​ ಆಫೀಸರ್​, ಪ್ರಾಜೆಕ್ಟ್​​ ಸಪೋರ್ಟ್​ ಸ್ಟಾಫ್​ ಸೇರಿದಂತೆ ಒಟ್ಟು 250 ಹುದ್ದೆಗಳಿವೆ.

ಬೆಂಗಳೂರಿನಲ್ಲಿ ಪ್ರಾಜೆಕ್ಟ್​ ಅಸೋಸಿಯೇಟ್-19, ಪ್ರಾಜೆಕ್ಟ್​ ಇಂಜಿನಿಯರ್-8 ಹಾಗು ಪ್ರಾಜೆಕ್ಟ್​​ ಮ್ಯಾನೇಜರ್​-2 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಬಿಇ, ಬಿಟೆಕ್​​, ಎಂಇ ಅಥವಾ ಎಂಟೆಕ್​, ಎಂಬಿಎ, ಸ್ನಾತಕೋತ್ತರ ಪದವಿ.

ವಯೋಮಿತಿ: ಹುದ್ದೆಗೆ ಅನುಸಾರವಾಗಿ ಗರಿಷ್ಠ ವಯೋಮಿತಿ 30 ರಿಂದ 50ವರ್ಷದವರೆಗೆ.

ವೇತನ: ವಾರ್ಷಿಕ ವೇತನ 3,60,000-22,90,000 ರೂ.

ಅರ್ಜಿ ಸಲ್ಲಿಕೆ: ಸಿಡಾಕ್​​ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಶುಲ್ಕ ಇರುವುದಿಲ್ಲ. ಆಗಸ್ಟ್​ 16 ಅರ್ಜಿ ಸಲ್ಲಿಕೆಗೆ ಕಡೇಯ ದಿನ. ಸಂಪೂರ್ಣ ಮಾಹಿತಿಗೆ ಅಭ್ಯರ್ಥಿಗಳು cdac.in ಇಲ್ಲಿಗೆ ಭೇಟಿ ನೀಡಿ.

ಐಒಸಿಎಲ್​ನಲ್ಲಿ ಅಪ್ರೆಂಟಿಸ್​ ಹುದ್ದೆ: ಇಂಡಿಯನ್​ ಆಯಿಲ್​ ಕಾರ್ಪೊರೇಷನ್​ ಲಿಮಿಟೆಡ್​ (ಐಒಸಿಎಲ್​)ನಲ್ಲಿ ಟ್ರೇಡರ್​​, ಟೆಕ್ನಿಶಿಯನ್​, ಪದವೀಧರ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನೇಮಕಾತಿ ನಡೆಯಲಿದೆ.

ಟ್ರೇಡ್​ ಅಪ್ರೆಂಟಿಸ್​ ಹುದ್ದೆಗೆ 10ನೇ ತರಗತಿ, ಐಟಿಐ, ಟೆಕ್ನಿಶಿಯನ್​ ಅಪ್ರೆಂಟಿಸ್​​ಗೆ ಡಿಪ್ಲೊಮಾ ಮತ್ತು ಪದವೀಧರ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಕನಿಷ್ಠ 18, ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಆಗಸ್ಟ್​ 19 ಅರ್ಜಿ ಸಲ್ಲಿಸಲು ಕಡೇಯ ದಿನ.

 ಈ ಕುರಿತು ಹೆಚ್ಚಿನ ಮಾಹಿತಿಗೆ iocl.com ಇಲ್ಲಿಗೆ ಭೇಟಿ ನೀಡಿ.