ಮನೆ ಅಪರಾಧ ಮನೆಯ ಹೊರಗೆ ಭಾರಿ ಸ್ಫೋಟ: ಮಣಿಪುರ ಮಾಜಿ ಶಾಸಕರ ಪತ್ನಿ ಸಾವು

ಮನೆಯ ಹೊರಗೆ ಭಾರಿ ಸ್ಫೋಟ: ಮಣಿಪುರ ಮಾಜಿ ಶಾಸಕರ ಪತ್ನಿ ಸಾವು

0

ಮಣಿಪುರ: ಮನೆಯ ಹೊರಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಮಣಿಪುರ ಮಾಜಿ ಶಾಸಕ ಯಾಮ್​ಥಾಂಗ್ ಹಾಕಿಪ್ ಅವರ ಪತ್ನಿ ಸಾವನ್ನಪ್ಪಿದ್ದಾರೆ.

Join Our Whatsapp Group

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ತಮ್ಮ ಮನೆಯ ಹೊರಗೆ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಆಗಸ್ಟ್ 10 ರಂದು (ಶನಿವಾರ) ಏಕೌ ಮುಲ್ಲಾಮ್ ಗ್ರಾಮದ ಸಾಯಿಕುಲ್‌ನ ಮಾಜಿ ಶಾಸಕ ಹೌಕಿಪ್ ಅವರ ಮನೆಯ ಬಳಿ ಸಂಭವಿಸಿದೆ.

ಸಪಂ ಚಾರುಬಾಲಾ (59) ಸೇರಿದಂತೆ ಕುಟುಂಬವು ಮನೆಯ ಹೊರಗೆ ಶುಚಿಗೊಳಿಸುವ ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಸೈಖುಲ್ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ಚಾರುಬಾಲಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಮತ್ತು ಉಳಿದವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.

ಪಕ್ಕದ ಮನೆಯ ಕಾಂಪೌಂಡ್‌ ನಲ್ಲಿ ಚಾರುಬಾಲಾ ಕೆಲವು ತ್ಯಾಜ್ಯ ವಸ್ತುಗಳನ್ನು ಸುಡುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ ಎಂದು ಕಂಡುಬಂದಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.

ತನಿಖೆ ನಡೆಯುತ್ತಿದ್ದು, ಹಾಕಿಪ್ ಮನೆಯ ಸಮೀಪ ಬಾಂಬ್ ಇಟ್ಟವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಹಾಕಿಪ್ ಮತ್ತು ಅವರ ಕುಟುಂಬಕ್ಕೆ ಯಾವುದೇ ಬೆದರಿಕೆ ಬಂದಿಲ್ಲ ಎಂದು ತಿಳಿದುಬಂದಿದೆ.