ಮನೆ ಮನರಂಜನೆ ‘ಲಾಫಿಂಗ್ ಬುದ್ಧ’ ಟ್ರೈಲರ್‌ ಬಿಡುಗಡೆ

‘ಲಾಫಿಂಗ್ ಬುದ್ಧ’ ಟ್ರೈಲರ್‌ ಬಿಡುಗಡೆ

0

ಬೆಂಗಳೂರು: ಪ್ರಮೋದ್ ಶೆಟ್ಟಿ ಅವರು ‘ಲಾಫಿಂಗ್ ಬುದ್ಧ’ ನಟಿಸಿ, ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

Join Our Whatsapp Group

ಸಿನಿಮಾ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ಪೊಲೀಸ್ ಠಾಣೆ, ಪೊಲೀಸ್ ಠಾಣೆಯ ಕಾನ್​ಸ್ಟೆಬಲ್​ಗಳು, ಅವರ ಸುತ್ತ ನಡೆಯುವ ಘಟನೆಗಳು ಇಂಥಹಾ ಸರಳ ಕತೆಯನ್ನು ಹೊಂದಿರುವ ಈ ಸಿನಿಮಾ ಟ್ರೈಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಒಂದು ಕಡೆ ರಿಷಬ್ ಶೆಟ್ಟಿ ತಮ್ಮ ನಿರ್ದೇಶನದ ಕಾಂತಾರ 2 ಸಿನಿಮಾದ ಚಿತ್ರೀಕರಣಕ್ಕೆ ರೆಡಿ ಆಗುತ್ತಿದ್ದರೆ, ಮತ್ತೊಂದು ಕಡೆ ತಮ್ಮದೇ ನಿರ್ಮಾಣದ ಲಾಫಿಂಗ್ ಬುದ್ಧ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದಾರೆ. ಸಿನಿಮಾ ಆಗಸ್ಟ್ 30ಕ್ಕೆ ಬಿಡುಗಡೆ ಆಗಲಿದೆ.ಲಾಫಿಂಗ್ ಬುದ್ಧ’ ಸಿನಿಮಾ ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಆಗಿತ್ತು. ಇದೊಂದು ಕಾಮಿಡಿ ಹಾಗೂ ಡ್ರಾಮಾ ಶೈಲಿಯ ಸಿನಿಮಾವಾಗಿದ್ದು, ಎಂ. ಭರತ್ ರಾಜ್ ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ ಬಹಳ ದಿನಗಳ ಬಳಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.‘ಲಾಫಿಂಗ್ ಬುದ್ಧ’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಾರೆ.

ತಮ್ಮ ದಢೂತಿ ದೇಹದಿಂದ ತಮಾಷೆಗೆ ಒಳಪಡುವ ಮಾತ್ರವಲ್ಲದೆ, ಹಿರಿಯ ಅಧಿಕಾರಿಗಳಿಂದ ಟೀಕೆ, ನಿಂದನೆಗೆ ಗುರಿಯಾಗುವ ಕಾನ್​ಸ್ಟೆಬಲ್ ಅದರ ಮಧ್ಯೆ ಠಾಣೆಯಲ್ಲಿ ನಡೆಯುವ ಒಂದು ಭೀಕರ ಘಟನೆ ಅದರಿಂದ ಇಡೀ ಪೊಲೀಸ್ ಠಾಣೆಯ ಸಿಬ್ಬಂದಿಯ ಮೇಲಾಗುವ ಪರಿಣಾಮ ಈವೆಲ್ಲವೂ ಕಟ್ಟಿಕೊಡುವಂತಿದೆ ಟ್ರೈಲರ್‌. ಪ್ರಮೋದ್ ಶೆಟ್ಟಿ ನಾಯಕ ನಟರಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಪ್ರಮೋದ್ ಶೆಟ್ಟಿ ಜೊತೆಗೆ ತೇಜು ಬೆಳವಾಡಿ, ಸುಂದರ್ ರಾಜ್ ಇನ್ನಿತರರು ನಟಿಸಿದ್ದಾರೆ. ಸಿನಿಮಾದಲ್ಲಿ ನಟ ದಿಗಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ವಿಷ್ಣು ವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಲಾಫಿಂಗ್ ಬುದ್ಧ’ ಚಿತ್ರಕ್ಕಿದೆ. ಇದೊಂದು ಹೊಸ ಬಗೆಯ ಕಥೆಯನ್ನು ಹೊಂದಿರುವ ಸಿನಿಮಾವಾಗಿದೆ. ಕನ್ನಡದಲ್ಲಿ ‘ತೂತು ಮಡಿಕೆ’ ಸಿನಿಮಾ ನಿರ್ಮಾಣ ಮಾಡಿ ಮೆಚ್ಚುಗೆ ಗಳಿಸಿದ್ದ ನಿರ್ಮಾಪಕ ಮಧುಸೂಧನ್ ರಾವ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ರೆಡಿಯಾಗಿದ್ದಾಗಿ ಸುದ್ದಿಯಾಗಿತ್ತು.