ಮನೆ ಅಪರಾಧ ದೆಹಲಿ: ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು ಆರೋಪಿ ಪರಾರಿ

ದೆಹಲಿ: ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು ಆರೋಪಿ ಪರಾರಿ

0

ದೆಹಲಿ: ರಸ್ತೆಯಲ್ಲಿ ನಡೆದ ಸಣ್ಣ ವಾಗ್ವಾದ ತಾರಕಕ್ಕೇರಿ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಕೇಂದ್ರ ದೆಹಲಿಯ ಕರೋಲ್​ ಬಾಗ್ ಪ್ರದೇಶದಲ್ಲಿ ನಡೆದಿದೆ.

Join Our Whatsapp Group

ಮನೋಜ್ ಶರ್ಮಾ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದು, ಶನಿವಾರ ಮಧ್ಯರಾತ್ರಿ ಊಟಕ್ಕೆಂದು ಸ್ಕೂಟಿಯಲ್ಲಿ ತೆರಳಿದ್ದರು. ಆ ಸಮಯದಲ್ಲಿ ಅವರ ಬೈಕ್ ಒಬ್ಬ ವ್ಯಕ್ತಿಗೆ ತಾಗಿತ್ತು, ಅದಕ್ಕೆ ಕೋಪಗೊಂಡ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ಪೊಲೀಸ್ ತಂಡವು ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ.

ಪೊಲೀಸ್ ನಿಯಂತ್ರಣ ಕೊಠಡಿಗೆ ಶನಿವಾರ ಮಧ್ಯರಾತ್ರಿಯ ಸುಮಾರಿಗೆ ಚೂರಿ ಇರಿತದ ಬಗ್ಗೆ ಮೊದಲು ಮಾಹಿತಿ ಸಿಕ್ಕಿತು. ಮಾಹಿತಿ ಪಡೆದ ತಕ್ಷಣ ಪೊಲೀಸ್ ತಂಡವು ಸ್ಥಳಕ್ಕೆ ಆಗಮಿಸಿ ಗಾಯಾಳು ಮನೋಜ್ ಶರ್ಮಾನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಕೊಲೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.