ಮನೆ ರಾಷ್ಟ್ರೀಯ ಥೈಲೆಂಡ್​ ನಲ್ಲಿ ವಿಮಾನ ಪತನ: 9 ಮಂದಿ ಸಾವು

ಥೈಲೆಂಡ್​ ನಲ್ಲಿ ವಿಮಾನ ಪತನ: 9 ಮಂದಿ ಸಾವು

0

ಥೈಲೆಂಡ್​: ಪ್ರಯಾಣಿಕರ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Join Our Whatsapp Group

ರಾಜಧಾನಿ ಬ್ಯಾಂಕಾಂಕ್​ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ.

ವಿಮಾನದಲ್ಲಿ 7 ಪ್ರಯಾಣಿಕರಿದ್ದರು, ಇಬ್ಬರು ಪೈಲಟ್​ಗಳು ಇದ್ದರು, ವಿಮಾನದಲ್ಲಿದ್ದವರ ಗುರುತು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ವಿಮಾನದಲ್ಲಿದ್ದವರಲ್ಲಿ ಹ್ಯಾಂಕಾಂಗ್​ ಐವರು, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು.

ಥೈಲೆಂಡ್ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಥಾಯ್ ಫ್ಲೈಯಿಂಗ್ ಸರ್ವೀಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸೆಸ್ನಾ ಕಾರವಾನ್ ಗುರುವಾರ ಮಧ್ಯಾಹ್ನ 2.46ಕ್ಕೆ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು.

ಟೇಕ್ ಆಫ್ ಆದ 11 ನಿಮಿಷಗಳ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್​ ಸಂಪರ್ಕವನ್ನು ಕಳೆದುಕೊಂಡರು. ಆ ಸಮಯದಲ್ಲಿ ವಿಮಾನವು ನಿಲ್ದಾಣದಿಂದ 35 ಕಿಲೋಮೀಟರ್​ ದೂರದಲ್ಲಿತ್ತು.ಅದು ಆಗ್ನೇಯಕ್ಕೆ 275 ಕಿಲೋಮೀಟರ್​ ದೂರದಲ್ಲಿರುವ ಟ್ರೀಟ್​ನ ಕರಾವಳಿ ಪ್ರಾಂತ್ಯದ ಕಡೆಗೆ ಹೋಗುತ್ತಿತ್ತು.

300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣವನ್ನು ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.