ಮನೆ ಮನರಂಜನೆ ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ “ಬ್ಲ್ಯಾಕ್‌ ಶೀಪ್‌’ ಚಿತ್ರ

ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ “ಬ್ಲ್ಯಾಕ್‌ ಶೀಪ್‌’ ಚಿತ್ರ

0

ಹೊಸಬರ “ಬ್ಲ್ಯಾಕ್‌ ಶೀಪ್‌’ ಚಿತ್ರ ಚಿತ್ರೀಕರಣ ಮುಗಿಸಿ ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದೆ. ಜೀವನ್‌ ಹಳ್ಳಿಕಾರ್‌ ಈ ಸಿನಿಮಾಕ್ಕೆ ನಿರ್ದೇಶನದ ಜತೆಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಅಶ್ವಿ‌ನಿ ಗುರುಚರಣ್‌ ಬಂಡವಾಳ ಹೂಡಿದ್ದಾರೆ. ಮಂಜುನಾಥ್‌ .ಪಿ.ರಾವ್‌ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

Join Our Whatsapp Group

ಈಗಾಗಲೇ “ಹೃದಯವೇ’ ಎಂಬ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆಗೊಂಡಿದೆ. ಕಥೆಯು ನಾಯಕ ಮತ್ತು ಖಳನಾಯಕನ ಮಧ್ಯೆ ನಡೆದ ಸಂಘರ್ಷದಲ್ಲಿ ಕೆಲ ಘಟನೆಗಳನ್ನು ಮರೆತು ಹೇಗೆ ಜೀವನ ಸಾಗಿಸಿರುತ್ತಾನೆ. ಸಿನಿಮಾವು ಕೊನೆ ಹಂತದವರೆಗೂ ಕುತೂಹಲ ಹೆಚ್ಚಿಸಲಿದೆ ಎಂಬುದು ತಂಡದ ಮಾತು.

ನವ ಪ್ರತಿಭೆಗಳಾದ ವಿಶಾಲ್‌ ಕಿರಣ್‌, ಪ್ರಶಾಂತ್‌.ವಿ.ಹರಿ, ನಿಶಾ ಹೆಗಡೆ, ಶಿವಾಂಗಿ ದಾವೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೃಷ್ಣಹೆಬ್ಟಾಳೆ, ಶ್ರೀಧರ್‌, ಸುಂದರ್‌ ವೀಣಾ, ಭಜರಂಗಿ ಪ್ರಸನ್ನ ಮುಂತಾದವರ ನಟನೆ ಇದೆ. ಅಭಿಜಿತ್‌ ಮಹೇಶ್‌-ಶೈಲೇಶ್‌ ಕುಮಾರ್‌ ಸಾಹಿತ್ಯದ ಗೀತೆಗಳಿಗೆ ಸಿದ್ದಾರ್ಥ್ ಕಾಮತ್‌ ಸಂಗೀತ ಸಂಯೋಜಿಸಿದ್ದಾರೆ.