ಮನೆ ದೇವಸ್ಥಾನ ಪೂಜಾ ವಿಧಾನಗಳು : ಆಗಮ ಶಾಸ್ತ್ರ

ಪೂಜಾ ವಿಧಾನಗಳು : ಆಗಮ ಶಾಸ್ತ್ರ

0

    ಚಿತ್ತಶುದ್ದಿಗೆ ಸಾಧಕವಾದ ಧಾರ್ಮಿಕ ವಿಚಾರಗಳ ಜೊತೆಗೆ ಮನೋವಿಕಾಸಕ್ಕೆ ಉತ್ತೇಜನಕಾರಿಗಳಾದ ಶಿಲ್ಪ,ಚಿತ್ರ, ಸಂಗೀತಗಳ ಮೂಲಕ ಆಗಮನಗಳು ಜನಪ್ರಿಯವಾಗಿವೆ. ಸೃಷ್ಟಿಯಿಂದ ಪ್ರಳಯದವರೆಗಿನ ಲೋಕದ ವಿಶಿಷ್ಟ ಆಗುಹೋಗುಗಳ ವಿಚಾರ ಈ ಆಗಮಶಾಸ್ತ್ರದಲ್ಲಿಯೇ ಅಡಗಿದೆ. ಧರ್ಮ ಕಾರ್ಯಾಚರಣೆಗಳನ್ನು ಭಕ್ತಿ ಮಾರ್ಗದಲ್ಲಿ ಸಗುಣೋಪಾಸನೆಯ ಮೂಲಕ ಆಚರಿಸುವ ವಿಧಿ ವಿಧಾನಗಳೂ ಈ ಆಗಮ ಶಾಸ್ತ್ರದಲ್ಲಿಯೇ ಉಕ್ತವಾಗಿವೆ. ಇಷ್ಟೇ ಅಲ್ಲದೆ 64 ಕಲೆಗಳಿಗೆ ಈ ಆಗಮವೇ ಆಶ್ರಯವಾಗಿದೆ.ಈಗ ನಾವು ಕಾಣುತ್ತಿರುವ ನಗರಗಳ ರಚನೆ, ಉದ್ಯಾವನಗಳ ನಿರ್ಮಾಣ, ಮಠಗಳ ಮತ್ತು ದೇವಾಲಯಗಳ ರಚನೆ, ಗೋಪುರ ಪ್ರಕಾರಗಳ ಪರಿಕಲ್ಪನೆ,ಸ್ಥಳಪರೀಕ್ಷೆ,ಅಶ್ವ ಪರೀಕ್ಷೆ, ಗಜಪರೀಕ್ಷೆ,ವಾಸ್ತುವಿದ್ಯಾ,ಸಾಮುದ್ರಿಕ,ಜ್ಯೋತಿಷ್ಯ,ಶಿಲ್ಪ, ಸಂಗೀತ,ನೃತ್ಯ, ವೈದ್ಯ ಮೊದಲಾದ ಕಲೆಗಳನ್ನು ಆಗಮಶಾಸ್ತ್ರವೇ   ಕಲೆಗಳನ್ನು  ಹೇಳುತ್ತದೆ.

Join Our Whatsapp Group

ಶೈವಾಗಮ

     ಈ ಆಗಮನಗಳಲ್ಲಿ ಶೈವಾಗಮ, ವೈಖಾನಸಾಗಮ, ಪಂಚರಾತ್ರಾಗಮ ಎಂದು ಮೂರು ವಿಧಗಳುಂಟು. ದೇವಾಲಯಗಳಿಗೆ ಹೋದಾಗ ಈ ಮೂರು ವಿಧಗಳನ್ನು ನಾವು ಗಮನಿಸಬಹುದು. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ ಪೂಜಾದಿ ವಿಧಾನಗಳು ಆಯಾ ಆಗಮಶಾಸ್ತ್ರಕ್ಕೆ ತಕ್ಕಂತೆ ಇರುತ್ತವೆ. ಶಿವಮಂದಿರಗಳಲ್ಲಿ ಪೂಜಾಪದ್ದತಿ ಶೈವಾಗಮವನ್ನು ಅವಲಂಬಿಸಿರುತ್ತದೆ. ವಿಷ್ಣು ಮಂದಿರದಲ್ಲಿ ಪೂಜಾಕ್ರಮವು ವೈಖಾನನ ಅಥವಾ ಪಂಚರಾತ್ರಾಗ ಮವನ್ನು ಅಭಿಲಂಬಿಸುತ್ತದೆ. ಶೈವಾಗಮದಲ್ಲಿ  ಅನೇಕ ಶಾಖೆಗಳುಂಟು. ಶಕ್ತಿ ದೇವತೆಗಳನ್ನು ಪೂಜಿಸುವ ಕ್ರಮಕ್ಕೆ ದೇವ್ಯಗಮ ಅಥವಾ ಶಾಕ್ತಾಗಮವೆಂದು  ಹೆಸರು.

    ಶೈವರಲ್ಲಿ ಅನಾದಿಶೈವ, ಮಹಾಶೈವ,ಅನುಶೈವ, ಅವಾಂತರಶೈವ, ಅನ್ಯಶೈವ, ವೀರಶೈವ ಎಂಬುದಾಗಿ  ಏಳು ವಿಧಗಳುಂಟು ಶೈವಾಗಮದಲ್ಲಿ ಮೂಲ ಪ್ರಕೃತಿಗೆ ಮನೋನ್ಮನೀ ಎಂದು ಹೆಸರು. ಶಿವೋಪಾಸನಿಗೆ ಪ್ರಶಸ್ತ್ಯವನ್ನು ಕೊಟ್ಟು ಶಿವ ಸಿದ್ಧಾಂತವನ್ನು ಪ್ರತಿಪಾದಿಸುವುದೇ ಶೈವಾಗಮದ ವೈಶಿಷ್ಟ.

ವಿಷ್ಣು ಪರತತ್ವ

      ವಿಷ್ಣು ಪರತ್ವಗಳನ್ನು ಎತ್ತಿ ಹಿಡಿಯುವ ಆಗಮನಗಳೆಂದರೆ ವೈಖಾನಸ  ಮತ್ತು ಪಾಂಚರಾತ್ರ, ಭಗವಂತನ ಅನುಗ್ರಹದಿಂದ ದೊರೆತ ಈ ಆಗಮಶಾಸ್ತ್ರವನ್ನು ಪ್ರಶ್ನೋತ್ತರ ರೂಪವಾಗಿ ಭೃಗು, ಅತ್ರಿ, ಮರೀಚಿ ಮತ್ತು ಕಶ್ಯಪರೆಂಬ ನಾಲ್ವರು  ಮಹರ್ಷಿಗಳಿಗೆ ವಿಖನಸ ಮಹರ್ಷಿಗಳು ಉಪದೇಶ ಮಾಡಿದರು. ಅವರೇ ಈ ಆಗಮದ ಪವರ್ತಕರಾದ್ದರಿಂದ ಇದಕ್ಕೆ ವೈಖಾನಸಾಗಮವೆಂದು. ಹೆಸರಾಗಿದೆ. ಪಾಂಚರಾತ್ರ ಗಮನವನ್ನು ಅನಂತ, ಗರುಡ, ವಿಷ್ಟಕ್ಸೇನ, ಬ್ರಹ್ಮ ಮತ್ತು ಇಂದ್ರ ಈ ಐದು ದೇವತೆಗಳಿಗೆ ಐದು ರಾತ್ರಿಗಳಲ್ಲಿ ಭಾವಂತನೇ ಉಪದೇಶ ಮಾಡಿದನು. ಆದ್ದರಿಂದ ಇದಕ್ಕೆ ‘ಪಾಂಚರಾತ್ರಾಗಮ’ ಎಂದು ಹೆಸರಾಯಿತು.