ಮನೆ ಅಪರಾಧ ಮೈಸೂರು: ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿ ಸಾವು

ಮೈಸೂರು: ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿ ಸಾವು

0

ಮೈಸೂರು(Mysuru): ಮನೆ ಮುಂದಿನ ಮರಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ, ಮರದ ಸನಿಹದಲ್ಲಿದ್ದ ವಿದ್ಯಾರ್ಥಿಗೆ  ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೆ ಆರ್ ನಗರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಮಳಲಿ ಗ್ರಾಮದ ಕಾಡೇಗೌಡರ ಮಗ ಮನೋಜ್ (16) ಮೃತಪಟ್ಟ ವಿದ್ಯಾರ್ಥಿ. 

ಮರಕ್ಕೆ 11 ಕೆ‌ ವಿ  ವಿದ್ಯುತ್ ತಂತಿ ಸ್ಪರ್ಶಗೊಂಡಿದ್ದನ್ನು ತಿಳಿಯದೆ ಮನೋಜ್ ಮರದ ಬಳಿ ಹೋಗಿದ್ದು, ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಮನೋಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಈ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.