ಮನೆ ಮನರಂಜನೆ ವಿಜಯ್ ರಾಘವೇಂದ್ರ ನಟನೆಯ ʼರಿಪ್ಪನ್ ಸ್ವಾಮಿʼ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್‌

ವಿಜಯ್ ರಾಘವೇಂದ್ರ ನಟನೆಯ ʼರಿಪ್ಪನ್ ಸ್ವಾಮಿʼ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್‌

0

ಬೆಂಗಳೂರು: ಪಂಚಾನನ ಫಿಲಂಸ್ ನಿರ್ಮಾಣದ, ಕಿಶೋರ್ ಮೂಡುಬಿದ್ರೆ ನಿರ್ದೇಶನದ ವಿಜಯ್ ರಾಘವೇಂದ್ರ  ಮುಖ್ಯ ಪಾತ್ರದಲ್ಲಿ ನಟಿಸಿರುವ ʼರಿಪ್ಪನ್ ಸ್ವಾಮಿʼ   ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ.

Join Our Whatsapp Group

ಪೋಸ್ಟರ್‌ನಲ್ಲಿ ಚಿನ್ನಾರಿ ಮುತ್ತ ರಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ʼಮಾಲ್ಗುಡಿ ಡೇಸ್ʼ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಕಿಶೋರ್ ಮೂಡುಬಿದ್ರೆ ʼರಿಪ್ಪನ್ ಸ್ವಾಮಿʼ ಮೂಲಕ ಒಂದು ಮಾಸ್ ಕಥೆ ಹೇಳಲು ಹೊರಟಿದ್ದಾರೆ. ವಿಶೇಷ ಎಂದರೆ ʼಮಾಲ್ಗುಡಿ ಡೇಸ್ʼ ಸಿನಿಮಾದಲ್ಲಿ ವಿಜಯ ರಾಘವೇಂದ್ರ ನಾಯಕನಾಗಿದ್ದರು. ಹೀಗಾಗಿ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಮೂಡಿಸಿದೆ. ತಾರಾಗಣದಲ್ಲಿ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿ ನಾಡು, ವಜ್ರದೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಮುಂತಾದವರು ಇದ್ದಾರೆ.

ಇನ್ನು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ ಕಳಸ ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡುತ್ತಿದ್ದಾರೆ. ರಂಗನಾಥ್ ಸಿ.ಎಂ. ಕ್ಯಾಮೆರಾ ಹಿಡಿದಿದ್ದಾರೆ.

ಇನ್ನು ಈ ಸಿನಿಮಾ ಪಂಚಾನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಕೈಜೋಡಿಸಿ ನಿರ್ಮಾಣ ಮಾಡುತ್ತಿದ್ದಾರೆ. ಪಂಚಾನನ ಫಿಲಂಸ್‌ನ ಮೊದಲನೇ ಸಿನಿಮಾ ಇದಾಗಿದೆ. ತನ್ನ ಎಲ್ಲ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರ ಇದ್ದು ಅತಿ ಶೀಘ್ರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.